ಉಡುಪಿ: ಉಡುಪಿಯಲ್ಲಿ ಬ್ಯಾಂಕ್ ಖಾತೆಗಳಿಂದ ಸ್ಕಿಮ್ಮಿಂಗ್ ನಡೆಸಿ ಹಣ ವಂಚಿಸಿರುವ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದಿದ್ದು, ಇದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಕೊಡವೂರು ಮಧ್ವನಗರದ ಪ್ರೀತಿ ಎಂ. ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 28,500ರೂ., ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನಿವಾಸಿ ಮಸೂದ ಎಂಬವರ ಕೆನರಾ ಬ್ಯಾಂಕ್ ಬಾಳೆಹೊನ್ನೂರು ಶಾಖೆಯ ಖಾತೆಯಿಂದ 2020ರ ನ.17ರಂದು 10500 ರೂ., ಅಂಬಲಪಾಡಿಯ ಶ್ರೀಪತಿ ಬಲ್ಲಾಳ್ ಎಂಬವರು ಸಿಂಡಿಕೇಟ್ ಬ್ಯಾಂಕ್ ಆದಿಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 20,500ರೂ. ಹಣವನ್ನು ಸ್ಕಿಮ್ಮಿಂಗ್ ನಡೆಸಿ ವಂಚಿಸಲಾಗಿತ್ತು.
ಹಣ ಕಳೆದುಕೊಂಡವರು ಆರೋಪಿಗಳ ಮತ್ತು ಸೂಕ್ತ ಭದ್ರತೆ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.












