ಅಜೆಕಾರು: ಸುಧಾಣ್ಣ ರೆಸಿಡೆನ್ಸಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಅಜೆಕಾರು: ಅಜೆಕಾರು ಶ್ರೀ ಪ್ರಗತಿ ಗಣೇಶ್ ಟ್ರೇಡ್ ಸೆಂಟರ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಸುಧಾಣ್ಣ ರೆಸಿಡೆನ್ಸಿ ಫ್ಯಾಮಿಲಿ ರೆಸ್ಟೋರೆಂಟ್ ಎಲ್ಲಾ ಆಧುನಿಕ ಸೌಲಭ್ಯದೊಂದಿಗೆ ಸೋಮವಾರ ಶುಭಾರಂಭಗೊಂಡಿತು. ಮುಂಬಯಿ ಉದ್ಯಮಿ ದೇವಸ್ಯ ಶಿವರಾಮ ಶೆಟ್ಟಿ ರೆಸ್ಟೋರೆಂಟ್‌ನ್ನು ಉದ್ಘಾಟಿಸಿದರು. ಈ ಸಂದರ್ಭ ಮುನಿಯಾಲು ಬೈಲು ದಿವಾಕರ ಶೆಟ್ಟಿ, ಸಿರಿಯಣ್ಣ ಶೆಟ್ಟಿ ಹಿರ್ಗಾನ, ಶಂಕರ್ ಶೆಟ್ಟಿ ಮುನಿಯಾಲ್, ಉದ್ಯಮಿ ಮಂಜುನಾಥ್ ಕಾಡುಹೊಳೆ, ಚಂದ್ರಶೇಖರ ಮಾಡ ಬೈಲೂರು, ರಾಮಕೃಷ್ಣ ಶೆಟ್ಟಿ ಬೈಲೂರು, ಶ್ರೀಧರ ಶೆಟ್ಟಿ ಜಾರ್ಕಳ, ಪ್ರಸಾದ್ ಬಲ್ಲಾಳ್ ಹೆಬ್ರಿ, ರಾಜೇಶ್ ಶೆಟ್ಟಿ ಜಾರ್ಕಳ, […]

ನಿನ್ನೆಯಷ್ಟೇ ಹಸೆಮಣೆಗೆ ಏರಿದ್ದ 23ರ ಹರೆಯದ ಯುವತಿ ಹೃದಯಾಘಾತಕ್ಕೆ ಬಲಿ

ಮಂಗಳೂರು: ವಿವಾಹವಾದ ಮರುದಿನವೇ ವಧು ಹೃದಯಾಘಾತದಿಂದ ನಿಧನ ಹೊಂದಿದ ದಾರುಣ ಘಟನೆ ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಎಂಬಲ್ಲಿ ಇಂದು ಸಂಭವಿಸಿದೆ. ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ (23) ಮೃತ ದುರ್ದೈವಿ. ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ರೊಂದಿಗೆ ಭಾನುವಾರ ನಡೆದಿತ್ತು. ಔತಣಕೂಟದ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಆಗಮಿಸಿದ್ದರು. ಮನೆಯಲ್ಲಿ ಸಂಭ್ರಮ ಕಳೆಕಟ್ಟಿತ್ತು. […]

ಆರ್‌ಟಿಐ ಕಾರ್ಯಕರ್ತನ ಮೇಲೆ ಹಲ್ಲೆ ಖಂಡಿಸಿ ಬಿಲ್ಲವ ಯುವ ವೇದಿಕೆಯಿಂದ ಪ್ರತಿಭಟನೆ

ಉಡುಪಿ: ಸಮಾಜ ಸೇವಕ, ಆರ್‌ಟಿಐ ಕಾರ್ಯಕರ್ತ ಬಾರ್ಕೂರು ಶಂಕರ ಶಾಂತಿ ಅವರಿಗೆ ಬಾರಕೂರು ದೇವಾಲಯದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ನೇತೃತ್ವದಲ್ಲಿ ಸೋಮವಾರ ಉಡುಪಿ ಬನ್ನಂಜೆ ಬಿಲ್ಲವ ಸಭಾಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಶಿವಾನಂದ ನಾಯ್ಕಿ ಅವರಿಗೆ ವೇದಿಕೆಯ ನಾಯಕರು ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಮಾತನಾಡಿ, ಪ್ರಕರಣ ನಡೆದು […]

ಬೈಂದೂರು: ಹೊಳೆಯಲ್ಲಿ ಮುಳುಗಿ ರೈತ ಮೃತ್ಯು

ಬೈಂದೂರು: ಹೊಳೆಗೆ ಬಿದ್ದು ರೈತನೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಂಬದ ಕೋಣೆ ಗ್ರಾಮದ ಎಂಬಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಕಂಬದ ಕೋಣೆ ಗ್ರಾಮದ ಪುಟ್ಟಿ ನಿವಾಸಿ ಸುರೇಶ್ ಪೂಜಾರಿ (51) ಮೃತ ವ್ಯಕ್ತಿ. ಇವರು ಫೆ. 28ರಂದು ಕೃಷಿ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದರು. ಆದರೆ ಅಂದು ಮನೆಗೆ ವಾಪಸ್ಸು ಬಂದಿರಲಿಲ್ಲ. ಮನೆಯವರು ಎಷ್ಟೇ ಹುಡುಕಾಟ ನಡೆಸಿದರೂ ಸುರೇಶ್ ಪೂಜಾರಿ ಪತ್ತೆಯಾಗಿರಲಿಲ್ಲ. ಮಾರ್ಚ್ 1 ರಂದು ಬೆಳಿಗ್ಗೆ 7ಗಂಟೆಗೆ ಮೃತರ ಸಂಬಂಧಿ ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆ […]

ಕಾರ್ಕಳ ತಾಪಂ ನೂತನ ಕಟ್ಟಡಕ್ಕೆ ಶಾಸಕ ಸುನಿಲ್ ಕುಮಾರ್ ಚಾಲನೆ

ಕಾರ್ಕಳ: ಕಾರ್ಕಳ ತಾಲೂಕು ಪಂಚಾಯತ್‌ನ ನೂತನ ಕಟ್ಟಡಕ್ಕೆ ಶಾಸಕ ವಿ. ಸುನಿಲ್‌ ಕುಮಾರ್‌ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ₹ 1.64 ಕೋಟಿ ವೆಚ್ಚದಲ್ಲಿ ತಾಲೂಕು ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣವಾಗಲಿದೆ. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವ ಆಶಯ ಹೊಂದಲಾಗಿದೆ ಎಂದರು. ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಕಾರ್ಕಳದ ಬಹುತೇಕ ಎಲ್ಲ ಸರಕಾರಿ ಕಚೇರಿಗಳನ್ನು ಪುನಶ್ಚೇತನದೊಂದಿಗೆ ಆಧುನೀಕರಣ ಗೊಳಿಸಲಾಗಿದೆ. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವೇಗ ದೊರೆಯಲಿದೆ ಎಂದರು. ತಾ.ಪಂ. ಅಧ್ಯಕ್ಷೆ ಸೌಭಾಗ್ಯ […]