ಉಡುಪಿ: ರಕ್ತನಿಧಿ ಕೇಂದ್ರಗಳಿಗೆ ಹೊಸದಾಗಿ ಅನುಮೋದನೆಯಾಗಿರುವ ಶುಶ್ರೂಷಕರ ಒಂದು ಹುದ್ದೆ ಹಾಗೂ ಗ್ರೂಪ್- ಡಿ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಶುಶ್ರೂಷಕರ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷ ಅಥವಾ ಅದಕ್ಕಿಂತ ಅಧಿಕ ಅವಧಿಯ ನರ್ಸಿಂಗ್ ಪಾಸಾದ ಪ್ರಮಾಣ ಪತ್ರ ಹಾಗೂ 2 ವರ್ಷ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮಾಸಿಕ ₹11,500 ವೇತನ ನೀಡಲಾಗುವುದು.
ಗ್ರೂಪ್ ಡಿ ಹುದ್ದೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಮಾಸಿಕ ₹ 8,000 ರೂ. ವೇತನ ನೀಡಲಾಗುವುದು.
ಜನವರಿ 8 ರಂದು ಬೆಳಿಗ್ಗೆ 10.30 ರಿಂದ ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.