ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ಸರಕಾರಿ ಹಾಗೂ ಖಾಸಗಿ ನೋಂದಾಯಿತ ಆಸ್ಪತ್ರೆಗಳಿಗೆ ಆರೋಗ್ಯ ಮಿತ್ರರನ್ನು ತಾತ್ಕಾಲಿಕ ನೆಲೆಯಲ್ಲಿ( ಸುಮಾರು 3 ತಿಂಗಳ ಅವಧಿಗೆ) ಒಟ್ಟು 14 ಹುದ್ದೆಗಳಿಗೆ ( ಉಡುಪಿ-9, ಬ್ರಹ್ಮಾವರ-1, ಕುಂದಾಪುರ-3, ಕಾರ್ಕಳ-1) ನೇಮಕಾತಿಗೊಳಿಸುವ ಬಗ್ಗೆ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ ಮೇ 29 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ, ರಜತಾದ್ರಿ ಮಣಿಪಾಲ ಉಡುಪಿ ಇಲ್ಲಿ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಾಗುವುದು.
ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ, ಕಂಪ್ಯೂಟರ್ ನಲ್ಲಿ ಕೆಲಸ ಮಾಡಿದ ಅನುಭವ ಇರುವ ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ, ವಿದ್ಯಾರ್ಹತೆಯ ಮೂಲ ದಾಖಲಾತಿ, ಆಧಾರ್ಕಾರ್ಡ್ ಹಾಗೂ ಇವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವಂತೆ ಹಾಗೂ ಆಯ್ಕೆಯಾದವರಿಗೆ ಪ್ರತೀ ಮಾಹೆ ರೂ.15,000 ಗೌರವಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.