udupixpress
Home Trending ಉಡುಪಿಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು: ಮುಂಬೈನಿಂದ ಬಂದ ಏಳು ತಿಂಗಳ ಗರ್ಭಿಣಿಯಲ್ಲಿ ಸೋಂಕು ದೃಢ

ಉಡುಪಿಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು: ಮುಂಬೈನಿಂದ ಬಂದ ಏಳು ತಿಂಗಳ ಗರ್ಭಿಣಿಯಲ್ಲಿ ಸೋಂಕು ದೃಢ

ಉಡುಪಿ: ಮುಂಬೈನಿಂದ ಮೇ 12ರಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದ 28 ವರ್ಷದ ಏಳು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು‌ ಖಚಿತಗೊಂಡಿದ್ದು, ಈ ಹಿನ್ನೆಯಲ್ಲಿ ಆಕೆಯನ್ನು ಕ್ವಾರಂಟೈನ್ ನಿಂದ ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಗರ್ಭಿಣಿಯೊಂದಿಗೆ ಪ್ರಯಾಣ ಬೆಳೆಸಿದ ಗಂಡನನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ. ಗರ್ಭಿಣಿಯೊಂದಿಗೆ ಮುಂಬೈನಿಂದ ಜಿಲ್ಲೆಗೆ ಪ್ರಯಾಣ ಬೆಳೆಸಿದ 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಬ್ಬರು ಸಾವನ್ನಾಪ್ಪಿದ್ದಾರೆ. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

error: Content is protected !!