ಕೊರೋನಾ ಸೋಕಿತ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ತೆರವು

ಕುಂದಾಪುರ: ಕೊರೋನಾ ಸೋಂಕಿತ ವ್ಯಕ್ತಿ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್‌ ಬಂಕ್ ಅನ್ನು ಇಪ್ಪತ್ತು ದಿನಗಳ‌ ಬಳಿಕ ಸೀಲ್ ಡೌನ್ ನಿಂದ ಮುಕ್ತಿಗೊಳಿಸಲಾಗಿದೆ. ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ್ದರು. ಹೀಗಾಗಿ ಕಳೆದ 21ದಿನಗಳಿಂದ ಪೆಟ್ರೋಲ್ ಬಂಕ್ ಸೀಲ್‌ಡೌನ್ ಮಾಡಲಾಗಿತ್ತು. ಕ್ವಾರೆಂಟೈನ್ ಅವಧಿಯ 28 ದಿನಗಳಾದ ಹಿನ್ನೆಲೆ ಇದೀಗ ಪೆಟ್ರೋಲ್ ಬಂಕ್ ಸೀಲ್‌ಡೌನ್ ತೆರವುಗೊಳಿಸಲಾಗಿದ್ದು, ಸೋಮವಾರದಿಂದ ಪೆಟ್ರೋಲ್ […]

ಕುಂದಾಪುರದ ಮಳೆಗೆ ಜನಸಂಚಾರ ಅಸ್ತವ್ಯಸ್ತ: ಅವೈಜ್ಞಾನಿಕ ಕಾಮಗಾರಿಗೆ ಜನತೆ ಹೈರಾಣ

ಕುಂದಾಪುರ: ಸೋಮವಾರ ಬೆಳಿಗ್ಗೆ ಸತತ ಒಂದು ಗಂಟೆಗೂ ಅಧಿಕ‌ ಕಾಲ ಸುರಿದ ಮಳೆಗೆ ನಗರದಲ್ಲಿ ಜನಸಂಚಾರ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳಿಗ್ಗಿನಿಂದಲೂ‌ ಮೋಡ ಕವಿದ ವಾತಾವರಣವಿದ್ದು, ಹನ್ನೊಂದು‌ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ತಾಲೂಕಿನಾದ್ಯಂತ‌ ಬಿರುಸಿನ‌ ಮಳೆಯಾಗಿದ್ದು, ಬಿಸಿಲ‌ ಝಳದಿಂದ‌ ಬಸವಳಿದ ಜನರಿಗೆ ಮಳೆ ತಂಪು ನೀಡಿತು. ಅವೈಜ್ಞಾನಿಕ ಕಾಮಗಾರಿಗೆ ಸವಾರರು ಹೈರಾಣ: ಕಳೆದ ದಶಕಗಳಿಂದ‌ ಆಮೆಗತಿಯಲ್ಲಿ ಸಾಗುತ್ತಿದ್ದ ಕುಂದಾಪುರ ಫ್ಲೈಓವರ್ ಕಾಮಗಾರಿ ಅರೆಬರೆಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರುನಿಂತು‌ ಕೆಲಕಾಲ ವಾಹನಗಳ ಸುಗಮ […]

ದುಬೈ ನಿಂದ ಎರಡನೇ ವಿಮಾನ ಮಂಗಳೂರಿಗೆ ಆಗಮನ

ಮಂಗಳೂರು: ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬಾಯಿಯಿಂದ ಎರಡನೇ ವಿಮಾನ ಸೋಮವಾರ ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 178 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಸಂಜೆ 7.55 ಕ್ಕೆ ಲ್ಯಾಂಡ್‌ ಆಯಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ […]

ಸ್ವರ್ಣಾನದಿಯ ಅಕ್ರಮ ಮರಳುಗಾರಿಕೆಯ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಸಿದ್ದರಾಮಯ್ಯ ಆಗ್ರಹ

ಉಡುಪಿ: ಇಲ್ಲಿನ ಸ್ವರ್ಣಾನದಿಯಲ್ಲಿ  ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮತ್ತು ಮರಳು ಕಳ್ಳಸಾಗಾಣಿಕೆಯಲ್ಲಿ ಆಡಳಿತ ಪಕ್ಷದ ನಾಯಕರೇ ಭಾಗಿಯಾಗಿರುವ ಆರೋಪವಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ‌ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸ್ವರ್ಣಾ ನದಿ ಮರಳು ಕಳ್ಳಸಾಗಾಣಿಕೆ ಬಗ್ಗೆ  ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗೆ ಬೆದರಿಕೆ ಕರೆ ಬರುತ್ತಿದ್ದು, ಅವರಿಗೆ ತಕ್ಷಣ ಪೋಲಿಸ್ ಭದ್ರತೆ ಒದಗಿಸಬೇಕು. ಜೀವಭಯ ಒಡ್ಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ‌ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆರಡು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. 30 ವರ್ಷದ ಯುವಕ ಮತ್ತು 55 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ 30 ವರ್ಷದ ಯುವಕ ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ ಹಾಗೂ 55 ವರ್ಷದ ಮಹಿಳೆಗೆ SARI ಪ್ರಕರಣದಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಮಂಗಳೂರಿನ ಯೆಯ್ಯಾಡಿ ನಿವಾಸಿ ಮಹಿಳೆ ಜ್ವರದಿಂದ ಕೋವಿಡ್ ಆಸ್ಪತ್ರೆಗೆ ಬಂದಾಗ ಸೋಂಕು ಪತ್ತೆ‌ಯಾಗಿದ್ದು, ಮಹಿಳೆಗೆ ಕೋವಿಡ್ […]