ಉಡುಪಿ: ಡೆಂಗ್ಯು ಜ್ವರದಿಂದ ಭಾನುವಾರ ರಾತ್ರಿ ಮೃತರಾದ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್ ವತಿಯಿಂದ ಬುಧವಾರ ಪ್ರೆಸ್ಕ್ಲಬ್ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ಶಶಿಧರ್ ಮಾಸ್ತಿಬೈಲು ಮಾತನಾಡಿ, ಪತ್ರಕರ್ತರು ತಮ್ಮ ಕೆಲಸದ ಜತೆಗೆ ಆರೋಗ್ಯದ ಬಗ್ಗೆಯು ಹೆಚ್ಚಿನ ಕಾಳಜಿ ವಹಿಸಬೇಕು. ಲವಲವಿಕೆಯ ವ್ಯಕ್ತಿತ್ವ, ಉತ್ತಮ ವಿಡಿಯೋ ಜರ್ನಲಿಸ್ಟ್ ಆಗಿದ್ದ ನಾಗೇಶ್ ಪಡು ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಆಶಿಸಿದರು.
ನಾಗೇಶ್ ಅವರ ಭಾವಚಿತ್ರಕ್ಕೆ ಪತ್ರಕರ್ತರು ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್, ಸಹ ಸಂಚಾಲಕ ಅನೀಶ್ ಡಿಸೋಜ, ಸಂಘದ ಪ್ರಮುಖದಾರ ಮೈಕಲ್ ರೋಡ್ರಿಗಸ್, ದಿವಾಕರ್ ಹಿರಿಯಡಕ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಉಪಸ್ಥಿತರಿದ್ದರು.