ಉಡುಪಿ: ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾಗಿರುವ ಉಡುಪಿಯ ಆಚಾರ್ಯ ಏಸ್ ತರಬೇತಿ ಸಂಸ್ಥೆಯ ಆನಲೈನ್ ಮುಖಾಂತರ ತರಬೇತಿ ಪಡೆದ ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ವಿದ್ಯಾಲಯದ ಶಾರ್ವರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕವನ್ನು ಪಡೆದಿದ್ದಾರೆ.
ಶಾರ್ವರಿ ಉಡುಪಿ ಮೂಲದ ವಾದಿರಾಜ ಪೆಜತ್ತಾಯ ಹಾಗೂ ಸಹನಾ ಪೆಜತ್ತಾಯ ಅವರ ಸುಪುತ್ರಿ. ಅವರು ಉಡುಪಿಯ ಆಚಾರ್ಯ ಏಸ್ ರೂಪಿಸಿದ ಪಠ್ಯ ಪುಸ್ತಕ, ಕಾರ್ಯಾಗಾರ ಕ್ರಾಶ್ ಕೋರ್ಸ್ ಹಾಗೂ ಆನ್ ಲೈನ್ ತರಬೇತಿ ಪಡೆದಿದ್ದರು.
ಆಚಾರ್ಯ ಏಸ್ ಗೆ ಶೇ. 100 ಫಲಿತಾಂಶ:
ಆಚಾರ್ಯ ಎಸ್ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಸಂಸ್ಥೆಯು ಶೇ. 100 ಫಲಿತಾಂಶ ದಾಖಲಿಸಿದೆ.
8 ವಿದ್ಯಾರ್ಥಿಗಳು ಶೇ. 95ಕ್ಕಿಂತಲೂ ಹೆಚ್ಚಿನ ಅಂಕಗಳಿಸಿದರೆ, 20 ವಿದ್ಯಾರ್ಥಿಗಳು ಶೇ 90ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ ಎಂದು ಆಚಾರ್ಯ ಏಸ್ ತರಬೇತಿ ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಹಾಗೂ ಬ್ರಹ್ಮಾವರ ಏಸ್ ನ ನಿರ್ದೇಶಕ ಅಕ್ಷೊಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.