ಉಡುಪಿ ಆಚಾರ್ಯ ಏಸ್ ನಲ್ಲಿ ಅ.18ರಂದು ಉಚಿತ ಮಾದರಿ ಸಂದರ್ಶನ

ಉಡುಪಿ: ಆಚಾರ್ಯಾಸ್‌ ಏಸ್‌ ವತಿಯಿಂದ ಒಂಬತ್ತನೇ ತರಗತಿ, ಎಸೆಸೆಲ್ಸಿ, ಪಿ.ಯು.ಸಿ., ಸಿ.ಇ.ಟಿ., ನೀಟ್, ಜೆ.ಇ.ಇ. ಮೇನ್ಸ್‌, ಕಾಮರ್ಸ್‌ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ಆ. 18ರಂದು ಮಧ್ಯಾಹ್ನ 1.30ರಿಂದ ಸಂಜೆ 5ರವರೆಗೆ ಉಡುಪಿಯ ಏಸ್‌ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಬ್ಯಾಂಕಿಂಗ್‌, ಐಟಿ, ರೈಲ್ವೇ, ಇನ್ಶೂರೆನ್ಸ್‌ ಹಾಗೂ ಇನ್ನಿತರ ಖಾಸಗಿ ಹಾಗೂ ರಾಷ್ಟ್ರೀಯ ಸಂಸ್ಥೆಗಳು ಆಯೋಜಿಸುವ ಸಂದರ್ಶನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 1.30ರಿಂದ ಸಂಜೆ 5ರ ವರೆಗೆ ಸಂದರ್ಶನ ನಡೆಯಲಿದ್ದು, ವಿವಿಧ ಸಂಸ್ಥೆಗಳು ಆಯೋಜಿಸುವ ಪ್ರವೇಶ ಪರೀಕ್ಷೆಯಲ್ಲಿ ಆಭ್ಯರ್ಥಿಗಳು ಉತ್ತೀರ್ಣರಾದ ಅನಂತರ ನೌಕರಿ ಪಡೆಯುವಲ್ಲಿ ಸಂಸ್ಥೆ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ.
ಮಾದರಿ ಸಂದರ್ಶನ ವೇಳೆ ವಿವಿಧ ಸಂಸ್ಥೆಗಳಿಂದ ನಿರೀಕ್ಷಿಸಲ್ಪಡುವ ಪ್ರಶ್ನೆಗಳು, ಅದಕ್ಕನುಗುಣವಾಗಿ ಆಭ್ಯರ್ಥಿಗಳು ನೀಡುವ ಉತ್ತರಗಳು, ಆಭ್ಯರ್ಥಿಗಳ ಸಂವಹನ, ನಡೆ-ನುಡಿಯ ವಿಧಾನಗಳು ಹೇಗಿರಬೇಕೆಂಬ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಲಭಿಸಲಿದೆ.
ಉಚಿತವಾಗಿ ಆಯೋಜನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು ಆ. 17ರೊಳಗೆ ಹೆಸರು ನೋಂದಾಯಿಸಬಹುದು. ಆಸಕ್ತರು ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಎದುರಿನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದೆಂದು ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಅವರು ಪ್ರಕಟನೆಯಲ್ಲಿ  ತಿಳಿಸಿದ್ದಾರೆ.