ಶ್ರೀ ಕೃಷ್ಣ ಮಠ: ಸಂಸ್ಕೃತ ಮಹಾಪಾಠ ಶಾಲೆಯ ವಾರ್ಷಿಕೋತ್ಸವ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಭಾ ಉಡುಪಿ, ಪರಮ ಪೂಜ್ಯ ಅಷ್ಠಮಠಾಧೀಶರಿಂದ ಸ್ಥಾಪಿತವಾದ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯ 115 ನೇಯ ವಾರ್ಷಿಕೋತ್ಸವವು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಪೆರ್ಡೂರು ಅನಂತ ಪದ್ಮನಾಭ ದೇಳವದಲ್ಲಿ ಸೂರ್ಯ ಸಂಕ್ರಮಣ

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತ ಪದ್ಮನಾಭ ದೇಳವದಲ್ಲಿ ಆ. 17ರಂದು ಶನಿವಾರ ಸೂರ್ಯ ಸಂಕ್ರಮಣವನ್ನು ಆಚರಿಸಲಾಯಿತು. ಆ ಪ್ರಯುಕ್ತ ದೇವಸ್ಥಾನದಲ್ಲಿ‌ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ  ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಶ್ರೀರಾಘವೇಂದ್ರ ಸ್ವಾಮೀಜಿಯವರ 348 ನೇ ಆರಾಧನೆ :ವಿಶೇಷ ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ  ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮೀಜಿಯವರ 348 ನೇ ಆರಾಧನೆ ಪ್ರಯುಕ್ತ  ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಸ್ವಾಮೀಜಿಯವರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಂದ ವಿಶೇಷ ಪೂಜೆ ನೆಡೆಯಿತು.

ಶ್ರೀ ಕೃಷ್ಣ ಮಠ:ಶ್ರೀ ರಾಘವೇಂದ್ರ ಸ್ವಾಮಿ ರಾಯರ 348 ನೇ ಆರಾಧನೆ:ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ  ಶ್ರೀ ರಾಘವೇಂದ್ರ ಸ್ವಾಮಿ  ಮಠದಲ್ಲಿ ರಾಯರ 348 ನೇ ಆರಾಧನೆ ಪ್ರಯುಕ್ತ    ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹಲ್ಲಾದ ರಾಯರ ರಥೋತ್ಸವ ನಡೆಯಿತು. ಶ್ರೀ  ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪ್ರಹಲ್ಲಾದ ರಾಯರ ಉತ್ಸವ ಮೂರ್ತಿಗೆ ಪರ್ಯಾಯ ಶ್ರೀಪಾದರು ಮಂಗಳಾರತಿ ಮಾಡಿ ವಿಶೇಷ ಪೂಜೆ ನೆರವೇರಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ‌ ವಿದೇಶಿ ಕರೆನ್ಸಿ ವಶ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣನದಲ್ಲಿ‌ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು,  ಸಿ ಐ ಎಸ್ ಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 3.89 ಲಕ್ಷ ರೂ. ವಿದೇಶಿ ಕರೆನ್ಸಿಯನ್ನು  ರಝಾಕ್ ಖಾಝಿ ಎಂಬಾತನಿಂದ ವಶಪಡಿಸಿಕೊಳ್ಳಲಾಗಿದೆ. ಈತ ಸ್ಪೆಸ್ ಜೆಟ್ ಮೂಲಕ ದುಬೈಗೆ ತೆರಳಲು ಸಿದ್ದತೆ ನಡೆಸಿದ್ದು, 18 ಸಾವಿರ ದಿರಮ್ಸ್ ಹಾಗೂ 2 ಸಾವಿರ ರಿಯಾಲ್ ವಿದೇಶಿ ಕರೆನ್ಸಿಯನ್ನು ತನ್ನ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ಎಂದು ತಿಳಿದು ಬಂದಿದೆ.