ಉಡುಪಿ: ಒಂಬತ್ತನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೈನ್ಸ್, ಕಾಮರ್ಸ್, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ನಿಂದ ಎಸೆಸೆಲ್ಸಿ, ಪಿಯು ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಆಚಾರ್ಯಾಸ್ ಏಸ್ ಸಂಸ್ಥೆಯ ವಿದ್ಯಾರ್ಥಿಗಳನ್ನು ‘ಆಚಾರ್ಯ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು.
ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಸುಮಂತ್ ಕಾರಂತ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದ ಆದಿತ್ಯ ಆರ್., ಗರಿಷ್ಠ ಅಂಕ ಗಳಿಸಿದ ಇತರ 15 ವಿದ್ಯಾರ್ಥಿಗಳನ್ನು ಕೇಮಾರು ಶ್ರೀ ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶಾಸಕ ಕೆ. ರಘುಪತಿ ಭಟ್ ಅಭಿನಂದಿಸಿದರು.
ಈ ಸಂದರ್ಭ ಮಾತನಾಡಿದ ಕೇಮಾರು ಶ್ರೀಗಳು, ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸಿನ ಜತೆಗೆ ಸಂಸ್ಕೃತಿ, ಸಹನೆ, ಸಜ್ಜನಿಕೆ ಗಳನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಮೌಲ್ಯಗಳನ್ನು ಅರಿತು ನಡೆಯುವ ಜೀವನ ಕ್ರಮವನ್ನು ಒಗ್ಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳ ಅಧ್ಯಯನವು ಕೇವಲ ವೈದ್ಯಕೀಯ, ಎಂಜಿನಿಯರಿಂಗ್ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ ಸಮಾಜ ಮತ್ತು ನಾಡಿನ ಅಭಿವೃದ್ಧಿಗೆ ನೆರವಾಗುವ ಅನೇಕ ವೃತ್ತಿಪರ ಅಧ್ಯಯನ ವಿಷಯಗಳಲ್ಲೂ ಯಶಸ್ಸು ಗಳಿಸುವಂತಾಗಬೇಕು ಎಂದರು.
ಸಂಸ್ಥೆಯ ವಾದಿರಾಜ ಆಚಾರ್ಯ ಮಾತನಾಡಿ, ಸೋಲಿಗೆ ನಿರಾಶರಾಗದೆ, ಛಲ ಬಿಡದ ತ್ರಿವಿಕ್ರಮನಂತೆ ಕಠಿನ ಪರಿಶ್ರಮದಿಂದ ಎಷ್ಟು ಎತ್ತರವನ್ನೂ ಏರಲು ಸಾಧ್ಯ. ಏಸ್ ಸಂಸ್ಥೆ ಆಯೋಜಿಸಿರುವ ಈ ಸಮ್ಮಾನಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಅವರೂ ಕೂಡ ಉಜ್ವಲ ಭವಿಷ್ಯ ಕಾಣುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಜೀವನ್ ಜೋಗಿ, ಪ್ರದ್ಯುಮ್ನ ಭಟ್, ಸಿಂಚನಾ, ವಾರೆನ್ ರಿವನ್ ಡಿ’ಸೋಜಾ, ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿದ ಮಾನಸ, ಕೀರ್ತನ, ಶ್ರೀಲಕ್ಷೀ ಶೆಣೈ, ವಿಘ್ನೕಶ್ ಸಾಮಂತ್, ರೋಹಿತ್ ಎ.ಜೆ. ಅಮೀನ್, ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿರುವ ಭೂಮಿಕಾ ಎಸ್. ದೇವಾಡಿಗ, ಅಕ್ಷತಾ ಭಟ್, ಶ್ರೀಕನ್ಯಾ, ಮೈನಾ ಅವರನ್ನು ಸಮ್ಮಾನಿಸಲಾಯಿತು.
ಪಿ. ಶ್ರೀನಿವಾಸ ಆಚಾರ್ಯ, ಹರೀಶ್ ಕಡೆಕಾರು,ಅಕ್ಷೋಭ್ಯ ಆಚಾರ್ಯ, ಸೋಹಾನಿ ಭಟ್ ಉಪಸ್ಥಿತರಿದ್ದರು.
ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರದೊಂದಿಗೆ ನಗದು ಬಹುಮಾನ ನೀಡಲಾಯಿತು. ಸಂಸ್ಥೆಯ ವರುಣ್ ಪ್ರಭು ನಿರೂಪಿಸಿದರು.
ತರಗತಿಗಳು ಪ್ರಾರಂಭ:
ಈಗಾಗಲೇ 9ನೇ ತರಗತಿ, 10ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿಯ ದೈನಂದಿನ ತರಗತಿಗಳು, ವಾರಾಂತ್ಯದ ಸಿಇಟಿ, ನೀಟ್, ಜೆಇಇ ತರಗತಿಗಳು ಆರಂಭವಾಗಿದ್ದು, ಸೇರ ಬಯಸುವ ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ನಿರ್ದೇಶಕ ಪಿ. ಲಾತವ್ಯ ಆಚಾರ್ಯ ತಿಳಿಸಿದ್ದಾರೆ.












