udupixpress
Home Trending ಉಡುಪಿ: ಪ್ರವಾಹಕ್ಕೆ ಸಿಲುಕಿದ್ದ 350 ಜನರ ರಕ್ಷಣೆ- ಡಿಸಿ ಜಗದೀಶ್

ಉಡುಪಿ: ಪ್ರವಾಹಕ್ಕೆ ಸಿಲುಕಿದ್ದ 350 ಜನರ ರಕ್ಷಣೆ- ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಈವರೆಗೆ ಪ್ರವಾಹಕ್ಕೆ ಸಿಲುಕಿದ ಒಟ್ಟು 350 ಮಂದಿ ಸಂತ್ರಸ್ತರನ್ನು NDRF ತಂಡದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

ಉಡುಪಿ, ಕಾಪು ,ಬ್ರಹ್ಮಾವರ, ಕಾರ್ಕಳ ತಾಲೂಕಿನಲ್ಲಿ ನೆರೆಯಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಲಾಗಿದೆ. ಉದ್ಯಾವರ, ಪೆರಂಪಳ್ಳಿ, ಕಡೆಕಾರು, ಪಿತ್ರೋಡಿ ಭಾಗದಲ್ಲಿ ನೆರೆಗೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.

ಮೀನುಗಾರರ ರಕ್ಷಣೆ:
ಮೀನುಗಾರಿಕೆಗೆ ತೆರಳಿದ್ದ ಒಟ್ಟು ಹತ್ತು ಮೀನುಗಾರರು ದಡಕ್ಕೆ ಬರಲು ಆಗದೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಲುಕಿದ್ದರು. ಬೋಟ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಪಸ್ಸು ಬರಲು ಆಗದೆ ದೀಪದಲ್ಲಿ ತಂಗಿದ್ದರು. ಅವರನ್ನು ಕರಾವಳಿ ಕಾವಲು ಪಡೆ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.