ಯಕ್ಷಗಾನ ಮದ್ದಲೆ ವಾದಕ ನಲ್ಲೂರು ಜನಾರ್ದನ ಆಚಾರ್ಯ ನಿಧನ

ಶೃಂಗೇರಿ: ಹಿರಿಯ ಯಕ್ಷಗಾನ ಮದ್ದಲೆವಾದಕ ನಲ್ಲೂರು ಜನಾರ್ದನ ಆಚಾರ್ಯ (75) ಇಂದು ಶೃಂಗೇರಿ ಸಮೀಪದ ನಲ್ಲೂರಿನ ಸ್ವಗ್ರಹದಲ್ಲಿ ನಿಧನ ಹೊಂದಿದರು. ಪ್ರಸಿದ್ಧ ಭಾಗವತರಾಗಿದ್ದ ಮರಿಯಪ್ಪ ಆಚಾರ್ ಇವರ ಸಹೋದರ. ಐದು ದಶಕಗಳಿಗೂ ಮೀರಿದ ಸುದೀರ್ಘ ವೃತ್ತಿ ಬದುಕಿನಲ್ಲಿ ಶಿವರಾಜಪುರ, ಶೃಂಗೇರಿ, ಕಿಗ್ಗ, ಹಾಲಾಡಿ, ಬಗ್ವಾಡಿ, ಗೋಳಿಗರಡಿ, ಮುಲ್ಕಿ, ಮಡಾಮಕ್ಕಿ, ಮೇಗರವಳ್ಳಿ, ಮಂದಾರ್ತಿ, ಗುತ್ಯಮ್ಮ, ಪೆರ್ಡೂರು, ಕಮಲಶಿಲೆ, ಮಾರಣಕಟ್ಟೆ ಮೇಳಗಳಲ್ಲಿ ಕಲಾಸೇವೆ ಗೈದಿದ್ದಾರೆ. ಸಂಪ್ರದಾಯಬದ್ಧ ಪೆಟ್ಟುಗಳಿಂದ ಕರ್ಣಾನಂದಕರ ನಾದ ಹೊಮ್ಮಿಸುವಲ್ಲಿ ನಿಷ್ಣಾತರಾಗಿದ್ದರು. ಭಾಗವತರ ಹಾಡುಗಾರಿಕೆಗೆ ಪೂರಕವಾಗಿ ವೇಷಧಾರಿಗಳ ಕುಣಿತಕ್ಕೆ […]

 ಮಾಳ-ಕುದುರೆಮುಖ- ಕಳಸ- ಹೊರನಾಡು- ಶೃಂಗೇರಿ ದಾರಿ ಬಂದ್

ಕಾರ್ಕಳ : ಭಾರಿ ಮಳೆಗೆ  ಅಲ್ಲಲ್ಲಿ ಗುಡ್ಡಗಳು ಜರಿಯುತ್ತಿರುವುದರಿಂದ ಮಾಳಘಾಟ್ ನಿಂದ ಎರಡು ಕಿ.ಮೀ ದೂರದಲ್ಲಿನ ಅಬ್ಬಾಸ್ ಕಟ್ಟಿಂಗ್ ಸಮೀಪದ ಓಟೆಹಳ್ಳ ನದಿಯ ಬಳಿಯ ಗುಡ್ಡವೊಂದು ಜರಿದು ಬೀಳುತ್ತಿರುವ ಪರಿಣಾಮವಾಗಿ ಮುಂಜಾಗ್ರತಾ ಕ್ರಮವಾಗಿ ಮಾಳ ಕಳಸ ಶೃಂಗೇರಿ ಸಂಚಾರವನ್ನು ಸಂಚಾರವನ್ನು ಬಂದ್ ಮಾಡಲಾಗಿದೆ. ಶೃಂಗೇರಿ ಚಲಿಸಲು ಆಗುಂಬೆ ಮಾರ್ಗವಾಗಿ ಸಂಚರಿಸಬಹುದು, ಭಾರಿ ಗಾತ್ರದ ವಾಹನಗಳು ಸಿದ್ದಾಪುರ ಮಾಸ್ತಿಕಟ್ಟೆ ಮಾರ್ಗವಾಗಿ ಸಂಚರಿಸಬಹುದು.

ಉಡುಪಿ ಶ್ರೀಕೃಷ್ಣಮಠಕ್ಕೆ ವರುಣನ ಜಲದಿಗ್ಬಂಧನ

ಉಡುಪಿ: ವರುಣನ ಆರ್ಭಟಕ್ಕೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ರಾಜಾಂಗಣಕ್ಕೆ ಮಳೆ ನೀರು ನುಗ್ಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಇಂದ್ರಾಣಿ ಹೊಳೆ ಹುಕ್ಕಿ ಹರಿದಿದ್ದು, ಇದರ ಪರಿಣಾಮ ಶ್ರೀಕೃಷ್ಣಮಠದ ಸುತ್ತಮುತ್ತಲಿನ ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಬೈಲಕೆರೆ, ರಾಜಾಂಗಣ ಪಾರ್ಕಿಂಗ್ ಪ್ರದೇಶ, ಕಲ್ಸಂಕ, ಬಡಗುಪೇಟೆ ರಸ್ತೆ, ಕೃಷ್ಣಮಠಕ್ಕೆ ಹೋಗುವ ಪ್ರವೇಶ ದ್ವಾರ ಮಳೆ ನೀರಿಗೆ ಜಲಾವೃತಗೊಂಡಿದೆ. ಪರ್ಯಾಯ ಅದಮಾರು ಮಠದ ಈಶಪ್ರಿಯ ಶ್ರೀಪಾದರು ಮಳೆ ಸೃಷ್ಟಿಸಿದ ಅವಾಂತರವನ್ನು ವೀಕ್ಷಿಸಿದರು. ತೆಪ್ಪದ ಮೂಲಕ ರಕ್ಷಣೆ: ಪರ್ಯಾಯ […]

ಉಡುಪಿ: ಪ್ರವಾಹಕ್ಕೆ ಸಿಲುಕಿದ್ದ 350 ಜನರ ರಕ್ಷಣೆ- ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಈವರೆಗೆ ಪ್ರವಾಹಕ್ಕೆ ಸಿಲುಕಿದ ಒಟ್ಟು 350 ಮಂದಿ ಸಂತ್ರಸ್ತರನ್ನು NDRF ತಂಡದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಉಡುಪಿ, ಕಾಪು ,ಬ್ರಹ್ಮಾವರ, ಕಾರ್ಕಳ ತಾಲೂಕಿನಲ್ಲಿ ನೆರೆಯಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಲಾಗಿದೆ. ಉದ್ಯಾವರ, ಪೆರಂಪಳ್ಳಿ, ಕಡೆಕಾರು, ಪಿತ್ರೋಡಿ ಭಾಗದಲ್ಲಿ ನೆರೆಗೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು. ಮೀನುಗಾರರ ರಕ್ಷಣೆ: ಮೀನುಗಾರಿಕೆಗೆ ತೆರಳಿದ್ದ ಒಟ್ಟು ಹತ್ತು ಮೀನುಗಾರರು ದಡಕ್ಕೆ ಬರಲು ಆಗದೆ […]

ಹಿರಿಯಡಕ ಜಲ ವಿದ್ಯುತ್ ಘಟಕದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಎನ್ ಡಿಆರ್ ಎಫ್ ಪಡೆ

ಉಡುಪಿ: ಹಿರಿಯಡಕ ಬಜೆ ಜಲಾಶಯದ ಸಮೀಪದ ಜಲವಿದ್ಯುತ್ ಘಟಕ ಸಿಲುಕಿದ್ದ ಇಬ್ಬರನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದೆ. ಈ ಇಬ್ಬರು ನಿನ್ನೆ ರಾತ್ರಿ ಪಂಪ್ ಹೌಸ್ ನಲ್ಲಿ ಮಲಗಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿಯಾಗಿ ನದಿನೀರು ಹುಕ್ಕಿಹರಿದಿದ್ದು, ಜಲ ವಿದ್ಯುತ್ ಘಟಕದೊಳಗೆ ನದಿನೀರು ನುಗ್ಗಿದೆ. ಇದರಿಂದ ಇಬ್ಬರು ಜನರೇಟರ್ ಮೇಲೆ ಹತ್ತಿ ಕುಳಿತಿದ್ದರು. ಇವರನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದೆ.