ಉಡುಪಿ: ಉದ್ಯಾವರ ಶ್ರೀ ವೀರವಿಠ್ಠಲ ದೇವಸ್ಥಾನ ಆಡಳಿತ ಮಂಡಳಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಸಂಯೋಜನೆಯೊಂದಿಗೆ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಭಾನುವಾರ ಉದ್ಯಾವರದ ಶ್ರೀ ವೀರ ವಿಠ್ಠಲ ದೇವಸ್ಥಾನದ ಶ್ರೀ ಸುಕೃತಿಂದ್ರ ಕಲಾಮಂಟಪದಲ್ಲಿ ನಡೆಯಿತು.
ಗುರುತಿಲಕ ಎಂ.ಎಸ್. ಗಿರಿಧರ್ ಬೆಂಗಳೂರು ಅವರು ಭಜನಾ ಕಮ್ಮಟ ನಡೆಸಿಕೊಟ್ಟರು.
ವೀರ ವಿಠ್ಠಲ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ನಾಗೇಶ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಯು. ವಿದ್ಯಾವಂತ, ಆಚಾರ್ಯ ಉಡುಪಿ, ಯು. ರಂಗನಾಥ ಶೆಣೈ ಉದ್ಯಾವರ, ಮೋಹಿನಿ ಭಟ್ ಮಂಜೇಶ್ವರ, ಶ್ರೀಕಾಂತ್ ನಾಯಕ್ ಕರ್ವಾಲು , ಐರೋಡಿ ಸಹನಶೀಲ ಪೈ ಉಡುಪಿ, ಯು. ಲತಾಗಣೇಶ್ ಆಚಾರ್ಯ, ಸಾಧನ ಕಿಣಿ ಮಣಿಪಾಲ, ಶ್ರುತಿ ಜಿ. ಶೆಣೈ ಮಣಿಪಾಲ, ಗಜೇಂದ್ರ ಶೇಟ್ ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಭಜನಾ ತರಬೇತಿ ನೀಡಿದ ಎಂ. ಎಸ್. ಗಿರಿಧರ್ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಸಾಧಕರಾದ ಸುಚಿತಾ ಪೈ, ಲತಾ ಜಿ. ಅಚಾರ್ಯ, ಭಾಗ್ಯ ಕಾಶೀನಾಥ್ ಭಟ್, ಪ್ರಭಾ ಅಚಾರ್ಯ ಈಶ್ವರನಗರ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಅಚಾರ್ಯ ಕರ್ವಾಲು ಕುಣಿತ ಭಜನ ತರಬೇತಿ ನೀಡಿದರು.
ಮಾಯಾ ಕಾಮತ್ ಸ್ವಾಗತಿಸಿದರು. ಜಯಲಕ್ಷ್ಮೀ ಶೆಣೈ ಕಟಪಾಡಿ ವಂದಿಸಿದರು. ಸವಿತಾ ಶೆಟ್ಟಿ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು. ನಂದಿನಿ ಶೆಣೈ, ರಮ್ಯಾ ಮಲ್ಯ, ವಿದ್ಯಾ ಶರ್ಮ, ದೀಪಾ ಶೆಣೈ, ಶೋಭಾ ಶೆಟ್ಟಿ, ಆಶಾ ಶೆಟ್ಟಿ , ಯಶೋಧ ಶೆಟ್ಟಿ ಉಪಸ್ಥಿತರಿದ್ದರು.