ಉಡುಪಿ: ಉದ್ಯಾವರ ಪಿತ್ರೋಡಿ ಪಾಪನಾಶಿನಿ ನದಿಯಲ್ಲಿ ಕಪ್ಪೆಚಿಪ್ಪು (ಮರುವಾಯಿ) ಹೆಕ್ಕಲು ಹೋಗಿ ಕಣ್ಮರೆಯಾಗಿದ್ದ ಯುವಕ, ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಮೃತನನ್ನು ಬಂಟಕಲ್ಲಿನ ಸುಮಂತ್ (22) ಎಂದು ಗುರುತಿಸಲಾಗಿದೆ. ಈತ ಸಂಬಂಧಿ ಸಂತೋಷ್ ಕುಮಾರ್ ಜತೆ ನಿನ್ನೆ ಸಂಜೆ ಕಪ್ಪೆಚಿಪ್ಪು ಹೆಕ್ಕಲು ನದಿಗೆ ಹೋಗಿದ್ದನು. ಪಿತ್ರೋಡಿ ಸಮೀಪ ಪಾಪನಾಶಿನಿ ಹೊಳೆಗೆ ಇಬ್ಬರು ಇಳಿದಿದ್ದು, ಸಂತೋಷ್ ಕುಮಾರ್ ನೀರಿನ ಸೆಳೆತದಿಂದ ಬಚಾವಾಗಿದ್ದರು.
ಆದರೆ ಸುಮಂತ್ ಕಣ್ಮರೆಯಾಗಿದ್ದರು. ಇಂದು ಬೆಳಿಗ್ಗೆ ಸುಮಂತ್ ಶವ ಪತ್ತೆಯಾಗಿದ್ದು, ಸ್ಥಳೀಯ ಈಜು ತಜ್ಞರು ಶವವನ್ನು ಹೊಳೆಯಿಂದ ಮೇಲಕ್ಕೆತ್ತಿ, ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.