ಮುಖ್ಯದ್ವಾರ ತೆರವು: ತೆಂಕನಿಡಿಯೂರು ಗ್ರಾಪಂ ವಿರುದ್ಧ ಪ್ರತಿಭಟನೆ

ಉಡುಪಿ: ಗ್ರಾಪಂ ಸದಸ್ಯರ ಗಮನಕ್ಕೆ ತಾರದೇ ಏಕಾಏಕಿ ತೆಂಕನಿಡಿಯೂರು ಗ್ರಾಪಂ ಮುಖ್ಯದ್ವಾರವನ್ನು ತೆರವುಗೊಳಿಸಿ ಗೋಡೆ ಕಟ್ಟಿರುವುದರ ವಿರುದ್ಧ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಖ್ಯಾತ್ ಶೆಟ್ಟಿ, ಗ್ರಾಪಂ ಸದಸ್ಯರ ಗಮನಕ್ಕೆ ತಾರದೆ ಹಾಗೂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸದೆ ಏಕಾಏಕಿಯಾಗಿ ಸರ್ಕಾರಿ ರಜಾದಿನದಂದು ಹಲವು ವರ್ಷಗಳಿಂದ ಇದ್ದ ಪಂಚಾಯತ್ ನ ಮುಖ್ಯದ್ವಾರ ತೆರವುಗೊಳಿಸಿರುವುದು ಖಂಡನೀಯ ಎಂದರು. ಜನರು ಸುಗಮವಾಗಿ ಪ್ರವೇಶಿಸಲು ಇದ್ದ […]

ರಾಜ್ಯದ ಒಂದು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ದಿನಾಂಕ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇದ್ದ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಉಪಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಪ್ರತಾಪ್ ಗೌಡ್ ಪಾಟೀಲ್ ರಾಜೀನಾಮೆಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ತೆರವಾಗಿದ್ದರೆ, ಬೀದರ್ ನ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ. ನಾರಾಯಣ ರಾವ್ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಹಾಗೆ ಬಿಜೆಪಿ ಸಂಸದ ಸುರೇಶ್ ಅಂಗಡಿ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಏಪ್ರಿಲ್ 17ಕ್ಕೆ ಈ ಮೂರು ಕ್ಷೇತ್ರದ […]

ಆಹಾ ಏನ್ ರುಚಿ ಶೆಣೈ ಹೋಂ ಪ್ರೊಡಕ್ಸ್ಟ್ ನ ಸವಿ, ಸವಿ ಖಾದ್ಯಗಳು, ಒಮ್ಮೆ ರುಚಿ ಸವೀರಿ ಬನ್ನಿ

ಸಾಂಪ್ರದಾಯಿಕ ತಿಂಡಿ, ತಿನಿಸುಗಳ ರುಚಿ, ಸೊಗಸು ಹೇಗಿರುತ್ತದೆಂದು ಅದನ್ನು ಸವಿದವರಿಗೆ ಗೊತ್ತಿರುತ್ತದೆ. ಆದರೆ ಪಕ್ಕಾ ಮನೆಶೈಲಿಯ ಸಿಹಿತಿಂಡಿ, ತಿನಿಸುಗಳ ಸ್ವಾದ, ಸೊಗಡನ್ನು ಈ ಕಾಲದಲ್ಲಿ ಸವಿದವರೇ ಕಡಿಮೆ. ದೇಸಿ ರುಚಿಯ  ಭರ್ಜರಿ ತಿಂಡಿತಿಂಡಿಗಳು, ಖಾರ ತಿನಿಸುಗಳ ಪರಿಮಳ, ಸ್ವಾದ ಮಾತ್ರ ಅದ್ಬುತವಾಗಿರುತ್ತದೆ ಎನ್ನುವುದು ಅದನ್ನು ಆಸ್ವಾದಿಸಿದವರಿಗೇ ಗೊತ್ತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಾರ್ಕೆಟ್ ರೋಡ್ ನ ಆಭರಣ ಜ್ಯುವೆಲ್ಲರ್ಸ್ ಎದುರಿಗಿರುವ ಶೆಣೈ ಹೋಂ ಪ್ರೊಡಕ್ಸ್ಟ್ ನ ಸಹಸಂಸ್ಥೆಯಾದ  ಶೆಣೈ ಬೇಕರಿಯಲ್ಲಿ ದೊರೆಯುವ ರುಚಿ ರುಚಿ ಸವಿ ತಿನಿಸುಗಳು, […]

ಉಡುಪಿಗೆ ಬಂದ ಚಿನ್ನಾಭರಣ ಕಳವು ಮಾಡುವ ಮಹಿಳಾ ಗುಂಪು: ಮಣಿಪಾಲ ಪೊಲೀಸರ ಸ್ಪಷ್ಟನೆ

ಉಡುಪಿ: ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆ ತೆರಳಿ ಚಿನ್ನಾಭರಣ ದೋಚುವ ಮಹಿಳಾ ಗುಂಪೊಂದು ಉಡುಪಿಯಲ್ಲಿ ಕಾರ್ಯಾಚರಿಸುತ್ತಿದೆ ಎನ್ನುವುದಾಗಿ ಮಣಿಪಾಲ ಪೊಲೀಸರು ಪ್ರಕಟಣೆ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಮಣಿಪಾಲ ಪೊಲೀಸರು ‘ಇದೊಂದು ಸುಳ್ಳು ಪ್ರಕಟಣೆಯಾಗಿದ್ದು, ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಿನಾಯಿಲ್ ಮಾರುವ ಮಹಿಳಾ ತಂಡವೊಂದು ಉಡುಪಿಗೆ ಬಂದಿದ್ದು, ಇವರು ಮನೆ ಮನೆಗೆ ತೆರಳಿ ಪಿನಾಯಿಲ್‌ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ […]

ಉಡುಪಿ: ಕಸ ವಿಲೇವಾರಿ ಕಾರ್ಮಿಕನ ಮೇಲಿನ ಹಲ್ಲೆ ಖಂಡಿಸಿ ದಸಂಸ ಪ್ರತಿಭಟನೆ

ಉಡುಪಿ: ನಗರಸಭೆಯ ಕಸ ವಿಲೇವಾರಿ ಕಾರ್ಮಿಕನ ಮೇಲಿನ ಹಲ್ಲೆ ಖಂಡಿಸಿ ಹಾಗೂ ನಗರಸಭೆಯ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನಗರಸಭೆ ಪೌರಕಾರ್ಮಿಕರಿಗೆ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾರ್ಮಿಕನ ಮೇಲೆ ಹಲ್ಲೆ ನಡೆದಾಗ ಕೇಸ್ ದಾಖಲಿಸಲು ಹಿಂದೇಟು ಹಾಕಿದೆ. ಈಗ ಹಲ್ಲೆ ನಡೆಸಿದ ಆರೋಪಿಗಳ ಅಂಗಡಿಯ ಲೈಸನ್ಸ್ ರದ್ದು ಪಡಿಸುವ ಮೂಲಕ ನಾವು ದೊಡ್ಡ […]