ಟ್ವಿಟರ್‌ ಭಾರತೀಯ ಗ್ರಾಹಕರ ಕುಂದು ಕೊರತೆ ಅಧಿಕಾರಿ ದಿಢೀರ್ ರಾಜೀನಾಮೆ

ನವದೆಹಲಿ: ಟ್ವಿಟರ್‌ ಸಂಸ್ಥೆಯ ಭಾರತೀಯ ಗ್ರಾಹಕರ ಕುಂದು ಕೊರತೆ ನಿವಾರಣಾ ಅಧಿಕಾರಿ
ಧರ್ಮೇಂದ್ರ ಚತುರ್ ದಿಢೀರ್ ಆಗಿ‌ ರಾಜೀನಾಮೆ ನೀಡಿದ್ದಾರೆ.

ಅವರು ಇತ್ತೀಚೆಗಷ್ಟೇ ಈ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ದಿಢೀರ್ ಬೆಳವಣಿಗೆಯೊಂದರಲ್ಲಿ ಅವರು, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರದ ಐಟಿ ನಿಯಮ ಪ್ರಕಾರ ಭಾರತದಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸುವುದು ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

ಈ ಹಿನ್ನೆಲೆಯಲ್ಲಿ ಚತುರ್‌ರನ್ನು ಟ್ವಿಟರ್‌ ನೇಮಿಸಿಕೊಂಡಿತ್ತು. ಐಟಿ ನಿಯಮ ಪಾಲನೆ ಮಾಡದ ಟ್ವಿಟರ್‌ ಹಾಗೂ ಕೇಂದ್ರದ ನಡುವೆ ಕಾರ್ಮೋಡದ ವಾತಾವರಣ ಆವರಿಸಿರುವ ನಡುವೆಯೇ ಚತುರ್‌ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್‌ ನಿರಾಕರಿಸಿದೆ.