ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಹೈನುಗಾರರ ವಿವಿಧೋದ್ದೇಶ ಸಹಕಾರಿ ಸಂಘವನ್ನಾಗಿ ಪರಿವರ್ತಿಸಿ: ಬೋಳ ಸದಾಶಿವ ಶೆಟ್ಟಿ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸ್ವಂತ ಕಟ್ಟಡ ದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಉಗ್ರಾನ ವ್ಯವಸ್ಥೆಯನ್ನು ಹೊಂದಿರುತ್ತದೆ. ಇಂತಹ ಸಂಘಗಳನ್ನು ವಿವಿಧೋದ್ದೇಶ ಸಹಕಾರಿ ಸಂಘವಾಗಿ ಪರಿವರ್ತಿಸಬೇಕು ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಆಗ್ರಹಿಸಿದ್ದಾರೆ.

ಅದರ ಮೂಲಕ ಪಡಿತರ ವ್ಯವಸ್ಥೆಯನ್ನು ನೀಡಬೇಕು. ಈ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ (NDDB) ಅನುಮತಿಯನ್ನು ಸಹ ನೀಡಿರುತ್ತಾರೆ. ಅಲ್ಲದೆ ದಿನ ಬಳಕೆಯ ಅಗತ್ಯ ವಸ್ತುಗಳ ಗ್ರಾಹಕರ ಅಂಗಡಿಯನ್ನು ತೆರೆಯಲು ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅವಶ್ಯಕತೆಗೆ ಅನುಗುಣವಾಗಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡುವುದು. ಈ ರೀತಿಯಾಗಿ ಹೈನುಗಾರರ ಮತ್ತು ಹಳ್ಳಿಯ ಜನರ ನೇರ ಸಂಪರ್ಕ ಹೊಂದಿರುವದರಿಂದ ಹಾಲು ಉತ್ಪಾದಕರ ಸಹಕಾರಿ ಸಂಘವು ಹಾಲು ಉತ್ಪಾದಕರ ವಿವಿಧೋದ್ದೇಶ ಸಹಕಾರಿ ಆಗಿ ಪರಿವರ್ತಿಸಿದಲ್ಲಿ ಸಂಘದ ಉದ್ಯೋಗಿಗಳಿಗೆ ಪೂರ್ಣವಧಿ ಉದ್ಯೋಗ ನೀಡುವುದರೊಂದಿಗೆ ಉತ್ತಮ ವೇತನ ನೀಡುವುದು. ಹೈನುಗಾರರ ಅಭಿವೃದ್ಧಿ ಜೊತೆಗೆ ಹಳ್ಳಿಯ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಹಲವು ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ರೇಷನ್ )(PDS)ಕುಟುಂಬ ಪಡಿತರ ವ್ಯವಸ್ಥಿತವಾಗಿ ಮಾಡಿ ಯಶಸ್ಸ್ ನ್ನು ಕಂಡಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.