ತುಳು ಶಿವಳ್ಳಿ ಬ್ರಾಹ್ಮಣ ಸಮ್ಮೇಳನದ ಮೂಲಕ ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸವಾಗಲಿ:ರಘವರೇಂದ್ರ ಸ್ವಾಮೀಜಿ

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಾಮಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಶುಕ್ರವಾರ ಮಠದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭೀಮನಕಟ್ಟೆ ಮಠದ ರಘವರೇಂದ್ರ ಸ್ವಾಮೀಜಿ ಮಾತನಾಡಿ, ಬೇರೆ ಸಮುದಾಯದವರು ಸಮ್ಮೇಳನ ಮಾಡಿ ಅವರ ವೈಭವ ತೋರಿಸುತ್ತಾರೆ. ಆದರೆ ನಾವು ಈ ಸಮ್ಮೇಳನದ ಮೂಲಕ ಕ್ಷೀಣವಾಗಿರುವ ನಮ್ಮ ತೌಡವ ಸಂಸ್ಕೃತಿ, ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ನಮ್ಮ ತೌಡವ ಸಂಸ್ಕೃತಿಯಲ್ಲಿ ಅನೇಕ ಮಹಾನೀಯ ಸ್ವಾಮೀಜಿ ಇದ್ದರು. ಆದರೆ ನಮ್ಮದು ನಿರ್ದಿಷ್ಠವಾದ ಗುರುಮಠ ಎಂಬ ಬಗ್ಗೆ ಯಾರಿಗೂ
ಶ್ರದ್ಧೆ ಇಲ್ಲ. ಇಂದು ಹೆಸರಿಗೆ ಮಾತ್ರ ಮಠ ಇದೆ. ಆ ಮಠದಲ್ಲಿ ಯಾವ ಎಲ್ಲ ಸ್ವಾಮೀಜಿಗಳು ಬೆಳಗಿ ಬಂದಿದ್ದಾರೆ. ಅವರ ಹಿರಿಮೆ, ಸಾಧನೆ ಏನೆಂಬುವುದು ನಮಗೆಗೊತ್ತಿಲ್ಲ. ಅದರ ಪರಿಣಾಮ ಶಿರ್ಡಿ, ಶಬರಿಮಲೆ ನಮ್ಮ ನಡುವೆ ಇರುವ ಅಜ್ಞಾನ ದೂರ ಆಗಬೇಕು. ಶಿವಳ್ಳಿ ಹೇಳುವುದು ಇತಿಹಾಸ ಪ್ರಸಿದ್ಧವಾದ
ಸ್ಥಳ. ಇದು ಮಧ್ವಾಚಾರ್ಯರು ಹುಟ್ಟಿ ಬಂದ ಪುಣ್ಯಭೂಮಿ. ಇದರ ಮಹತ್ವ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಇಂತಹ ಸಮ್ಮೇಳನಗಳು ನಡೆಯಬೇಕು. ಮಧ್ವಾಚಾರ್ಯರ ಮಹತ್ವ, ಅವರು ನೀಡಿದ ವಿಚಾರಧಾರೆಗಳನ್ನು ನಾವು ಅರಿಯದಿದ್ದರೆ ನಾವು ಯಾವತ್ತೂ ಹೀಗೆ ಇರುತ್ತವೆ. ನಮ್ಮಲ್ಲಿ
ಸುಧಾರಣೆ ಆಗುವುದಿಲ್ಲ ಎಂದು ಹೇಳಿದರು.

ಶ್ರೀ ಶ್ರೀ ವಿದ್ಯಾಧೀಶ  ತೀರ್ಥ ಶ್ರೀಪಾದರು ,ಪಲಿಮಾರು ಮಠದ ಕಿರಿಯ ಯತಿಗಳಾ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ  ಸಮ್ಮೇಳನದ ಅಧ್ಯಕ್ಷರುಗಳಾದ ರಾಮದಾಸ ಮಡಮಣ್ಣಾಯ,ಡಾ.ಬಾಲಕೃಷ್ಣ ಮೂಡಂಬಡಿತ್ತಾಯ, ಪ್ರಧಾನ ಸಂಚಾಲಕರಾದ ಎಂ.ಬಿ.ಪುರಾಣಿಕ್,ಕಾರ್ಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ,ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊಳದವರು ಉಪಸ್ಥಿತರಿದ್ದರು.