ಉಡುಪಿ‌ ಜಿಲ್ಲೆಯಲ್ಲಿ ಭಾರೀ ಮಳೆ: ನಾಳೆ ಶಾಲಾ- ಕಾಲೇಜಿಗೆ ರಜೆ 

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 6ರಂದು  ಉಡುಪಿ ಜಿಲ್ಲೆಯ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ: ಜುಲೈ 10 ರಂದು ತ್ರಿಶಾ ಅಡ್ಮಿಶನ್ ಟೆಸ್ಟ್

ಉಡುಪಿ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತ್ರಿಶಾ ಅಡ್ಮಿಶನ್ ಟೆಸ್ಟ್ (ಟಿಎಟಿ) ಪರೀಕ್ಷೆ ಜು.10 ರಂದು ನಡೆಯಲಿದೆ. ಸಾಮಾನ್ಯ ಜ್ಞಾನದ ಜತೆಗೆ ವಾಣಿಜ್ಯ ವಿಷಯಗಳ ಅರಿವನ್ನು ಪರೀಕ್ಷಿಸುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬುದ್ದಿವಂತಿಕೆಯನ್ನು ಅರಿಯಲು ಈ ಪರೀಕ್ಷೆ ಸಹಕಾರಿಯಾಗಲಿದೆ. ಎಂಬಿಎ ಪ್ರವೇಶ ಪರೀಕ್ಷೆ, ಐಎಎಸ್, ಸಿಎ, ಸಿಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ಯಶಸ್ವಿಯಾಗಿ ನಡೆಸಲಾದ ಟಿಎಟಿ – 1 ದ್ವಿತೀಯ ಪಿಯುಸಿಯ […]

ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ಕೊಡದೆ ಎಂದಿನಂತೆ ತರಗತಿ ನಡೆಸಿದ ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ಆಂಗ್ಲ ಮಾಧ್ಯಮ ಶಾಲೆ

ಕಾರ್ಕಳ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ, ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂದಿನಂತೆ ತರಗತಿ ನಡೆದಿದೆ. ಮಳೆಯ ವಿಕೋಪಕ್ಕೆ ಮಕ್ಕಳು ಗುರಿಯಾಗದಿರಲೆಂದು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಸಾರುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ, ಇಲ್ಲಿನ ಆಡಳಿತ ಮಂಡಳಿ ಆದೇಶಕ್ಕೆ ಕಿಮ್ಮತ್ತು ನೀಡದೆ ತರಗತಿ ನಡೆಸಿದೆ. ಶಾಲೆಯು ತಮ್ಮ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದು ಎಂದಿನಂತೆ ತರಗತಿಯನ್ನು ನಡೆಸಿರುವುದು […]

ಅಂಬಲಪಾಡಿ ಜಂಕ್ಷನ್ ನಲ್ಲಿ ರಸ್ತೆ ಅಫಘಾತ: ಸೈಂಟ್ ಸಿಸಿಲಿ ಹೈಸ್ಕೂಲ್ ಬಾಲಕನ ಸ್ಥಿತಿ ಗಂಭೀರ

ಉಡುಪಿ: ಅಂಬಲಪಾಡಿ ಜಂಕ್ಷನ್ ನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಫಘಾತ ಒಂದರಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲ್ ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಆಪತ್ಭಾಂಧವ ವಿಶು ಶೆಟ್ಟಿ ಅಂಬಲಪಾಡಿ, ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರುವ ಬಗ್ಗೆ ಮಾಹಿತಿ ಇಲ್ಲದ ಕಾರಣ ಆದಿತ್ಯ ತನ್ನ ಸೈಕಲ್ ಮೂಲಕ ಶಾಲೆಗೆ […]

25 ದಿನಗಳಲ್ಲಿ ಚಾರ್ಲಿ ಕಲೆಕ್ಷನ್ 150 ಕೋಟಿ: 5 ಶೇ. ಭಾರತೀಯ ತಳಿಯ ನಾಯಿಗಳ ರಕ್ಷಿಸುವ ಎನ್.ಜಿ.ಒಗಳಿಗೆಂದ ನಿರ್ಮಾಪಕ ರಕ್ಷಿತ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸತೊಂದು ಸಂಚಲವನ್ನು ಹುಟ್ಟು ಹಾಕಿದ 777ಚಾರ್ಲಿ ಚಿತ್ರವು 25 ದಿನಗಳಲ್ಲಿ ದೇಶಾದ್ಯಂತ 450 ಸ್ಕ್ರೀನ್ ಗಳಲ್ಲಿ, ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿ ಸರಿ ಸುಮಾರು 150 ಕೋಟಿ ರೂಗಳನ್ನು ಗಲ್ಲಾಪೆಟ್ಟಿಗೆಯಿಂದ ಬಾಚಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ-ನಟ ರಕ್ಷಿತ್ ಶೆಟ್ಟಿ, ಚಾರ್ಲಿ ಯಶಸ್ಸಿನಿಂದ ಇಡೀ ತಂಡ ಸಂಪೂರ್ಣವಾಗಿ ಖುಷಿಯಾಗಿದೆ. ಇದು ಬರಿಯ ಚಿತ್ರವಲ್ಲ, ಇದು ನಮ್ಮೆಲ್ಲರ ಜೀವನದ ಮೂರು ವರ್ಷದ ಅನುಭವ ಕಥನ. ಕೆಜಿಎಫ್-1 ಮತ್ತು ಕೆಜಿಎಫ್- 2 ಚಿತ್ರವು ಇಡೀ […]