ಮಲ್ಪೆ: ಸರಕಾರಿ ಜಾಗ ಅತಿಕ್ರಮಣ ಮಾಡಿದಲ್ಲಿ ಕಾನೂನು ಕ್ರಮ

ಮಲ್ಪೆ: ಮಲ್ಪೆ ಬೀಚ್ ಉತ್ತರ ಭಾಗದ ಪ್ರದೇಶದಲ್ಲಿರುವ ಸರಕಾರಕ್ಕೆ ಸೇರಿದಂತಹ ಖಾಲಿ ಜಾಗದ ಸರ್ವೇ ಪ್ರಕ್ರಿಯೆಯು ಈಗಾಗಲೇ ಮುಕ್ತಾಯಗೊಂಡಿದ್ದು, ಸದರಿ ಪ್ರದೇಶದಲ್ಲಿ ಕೆಲವೊಂದು ವ್ಯಕ್ತಿಗಳು ಅನಧಿಕೃತವಾಗಿ ಮಣ್ಣನ್ನು ಹಾಕಿ ಜಾಗವನ್ನು ಸಮತಟ್ಟು ಮಾಡುತ್ತಿರುವುದು ಮತ್ತು ಸರ್ಕಾರಿ ಜಾಗ ಅತಿಕ್ರಮಣ ಮಾಡುತ್ತಿರುವುದು ಕಂಡುಬಂದಿದ್ದು, ಇದು ಸಿ.ಆರ್.ಝಡ್ ಇಲಾಖೆಯ ನಿಯಮ ಉಲ್ಲಂಘನೆಯಾಗಿರುತ್ತದೆ.

ಆದ್ದರಿಂದ ಸದರಿ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು ಹಾಗೂ ಸರಕಾರಕ್ಕೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಅನಧಿಕೃತವಾಗಿ ಕಾಮಗಾರಿ ಕೈಗೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.