ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಾ ಸಮುದಾಯಗಳ ತಳವರ್ಗಗಳ ನಿಜವಾದ ನಾಯಕ: ಪ್ರೊ ಕೆ ಫಣಿರಾಜ್

ಮಣಿಪಾಲ: ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಷ್ಟೇ ಅಲ್ಲದೆ ಎಲ್ಲಾ ಸಮುದಾಯಗಳ ತಳವರ್ಗಗಳ ಮತ್ತು ಒಟ್ಟು ಸಮಾಜದ ನಿಜವಾದ ನಾಯಕ. ಆ ಅರ್ಥದಲ್ಲಿ, ಅವರು ಗ್ರಾಮ್ಶಿಯು ಪ್ರತಿಪಾದಿಸಿದ ಸಂಪೂರ್ಣ ‘ಆರ್ಗಾನಿಕ್ ಇಂಟಲೆಕ್ಚುಯಲ್’ ಎಂದು ಲೇಖಕ-ಚಿಂತಕ ಪ್ರೊ ಕೆ ಫಣಿರಾಜ್ ವಾದಿಸಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ ‘ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಐತಿಹಾಸಿಕ ಮಹತ್ವ’ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಫಣಿರಾಜ್, ಡಾ.ಅಂಬೇಡ್ಕರ್ ಅವರನ್ನು ಕೇವಲ ದಲಿತರ ನಾಯಕ ಎಂದು […]

ದ್ವಿತೀಯ ಪಿಯುಸಿ ಫಲಿತಾಂಶ: ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ರಾಜ್ಯ ಮಟ್ಟದ ರ‍್ಯಾಂಕ್

ಕುಂದಾಪುರ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ‍್ಯಾಂಕ್‌ಗಳನ್ನು ಪಡೆಯುವುದರೊಂದಿಗೆ ಅಭೂತ ಪೂರ್ವ ಸಾಧನೆ ಮೆರೆದ ಕುಂದಾಪುರದ ಏಕೈಕ ಕಾಲೇಜ್ ಆಗಿ ಹೊರಹೊಮ್ಮಿದೆ. ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ನೇಹಾ ಜೆ. ರಾವ್ 594 ಅಂಕಗಳೊಂದಿಗೆ ತೃತೀಯ ರ‍್ಯಾಂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ‍್ಯಾಂಕ್, ಸೃಜನ್ ಭಟ್. ಕೆ 591 ಅಂಕಗಳೊಂದಿಗೆ 6ನೇ ರ‍್ಯಾಂಕ್, ಪ್ರಜ್ಞಾ , ನಿತೇಶ್, ಪ್ರಣಮ್ಯ ಜಿ.ಎಚ್ 589 ಅಂಕಗಳೊಂದಿಗೆ 8ನೇ […]

ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಾಗ ಸಂಕೋಚ ಪ್ರಕ್ರಿಯೆ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗ ಬಿಂಬ ಸಂಕೋಚ ಪ್ರಕ್ರಿಯೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ನಾಗ ಬಿಂಬ ಸಂಕೋಚದ ಜೊತೆಗೆ ಬ್ರಹ್ಮಲಿಂಗೇಶ್ವರ ರಕ್ತೇಶ್ವರಿ, ನಂದಿಕೋಣ ಕ್ಷೇತ್ರಪಾಲ, ಸಂಕೋಚ ಪ್ರಕ್ರಿಯೆಯು ನೆರವೇರಿ ಶಿಲಾ ಬಿಂಬಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿದ ಬಾಲಾಲಯದಲ್ಲಿ ಇರಿಸಲಾಯಿತು. ಆ ಪ್ರಯುಕ್ತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಸಂಪನ್ನಗೊಂಡವು. ನವೀಕೃತ ನಾಗಾಲಯದ ನೂತನ ಆರೂಢದಲ್ಲಿ ಸಪರಿವಾರ ಸಹಿತವಾಗಿ ನಾಗಶಿಲಾ […]

ಕಾರ್ಕಳ ಕ್ರಿಯೇಟಿವ್‌ ಪ.ಪೂ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ: ಕಾಲೇಜಿಗೆ ಒಟ್ಟು ಏಳು ರ‍್ಯಾಂಕ್‌ 

ಕಾರ್ಕಳ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 380 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರ‍್ಯಾಂಕ್‌ ಗಳಲ್ಲಿ ಏಳು ರ‍್ಯಾಂಕ್‌ ಗಳು ಕಾಲೇಜಿಗೆ ಸಂದಿವೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಸ್ತುತ್‌ ಪಟೇಲ್‌ 592 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್‌ […]

ಮಲ್ಪೆ: ಸರಕಾರಿ ಜಾಗ ಅತಿಕ್ರಮಣ ಮಾಡಿದಲ್ಲಿ ಕಾನೂನು ಕ್ರಮ

ಮಲ್ಪೆ: ಮಲ್ಪೆ ಬೀಚ್ ಉತ್ತರ ಭಾಗದ ಪ್ರದೇಶದಲ್ಲಿರುವ ಸರಕಾರಕ್ಕೆ ಸೇರಿದಂತಹ ಖಾಲಿ ಜಾಗದ ಸರ್ವೇ ಪ್ರಕ್ರಿಯೆಯು ಈಗಾಗಲೇ ಮುಕ್ತಾಯಗೊಂಡಿದ್ದು, ಸದರಿ ಪ್ರದೇಶದಲ್ಲಿ ಕೆಲವೊಂದು ವ್ಯಕ್ತಿಗಳು ಅನಧಿಕೃತವಾಗಿ ಮಣ್ಣನ್ನು ಹಾಕಿ ಜಾಗವನ್ನು ಸಮತಟ್ಟು ಮಾಡುತ್ತಿರುವುದು ಮತ್ತು ಸರ್ಕಾರಿ ಜಾಗ ಅತಿಕ್ರಮಣ ಮಾಡುತ್ತಿರುವುದು ಕಂಡುಬಂದಿದ್ದು, ಇದು ಸಿ.ಆರ್.ಝಡ್ ಇಲಾಖೆಯ ನಿಯಮ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸದರಿ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಮುನ್ಸೂಚನೆ ನೀಡದೇ ತೆರವುಗೊಳಿಸಲಾಗುವುದು ಹಾಗೂ ಸರಕಾರಕ್ಕೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಅನಧಿಕೃತವಾಗಿ ಕಾಮಗಾರಿ ಕೈಗೊಳ್ಳುವವರ ವಿರುದ್ಧ ಕಾನೂನು […]