ಬೆಂಗಳೂರು: ದಾವಣಗೆರೆ ಉತ್ತರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳು ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಮತ ಚಲಾಯಿಸಿ ಹರ್ಷ ವ್ಯಕ್ತ ಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ ಹಾಗೂ ಜಾನಪದ ಕಲಾವಿದೆ, ಚುನಾವಣಾ ರಾಯಭಾರಿಯಾದ ಮಂಜಮ್ಮ ಜೋಗತಿ ಮತ ಚಲಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನ ಸ್ನೇಹಿ ಮತದಾನ ಕೇಂದ್ರ 152 ಹಾಗೂ ಕುಡುಪುವಿನ ಎಸ್.ಡಿ.ಎಂ ಮಂಗಲಜ್ಯೋತಿ ಶಾಲೆ ಮತಗಟ್ಟೆ ನಂಬರ್ 144/20 ರಲ್ಲಿ ವಿಶೇಷ ಚೇತನರಿಂದ ಮತದಾನ ಕಾರ್ಯ ನಡೆಯಿತು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ವಿಧಾನ ಸಭಾ ಕ್ಷೇತ್ರದ ಸರ್ಕಾರಿ ಜೂನಿಯರ್ ಕಾಲೇಜ್ ಕೊಟ್ಟುರ್ ಮತಗಟ್ಟೆ 238 ನಲ್ಲಿ ಒಂದೇ ಮನೆಯ ಮೂರು ತಲೆಮಾರಿನವರು ಮತ ಚಲಾಯಿಸಿದ್ದಾರೆ.