ಶಿವಸೇನೆ ಬಂಡಾಯ: ಉದ್ದವ್ ಠಾಕ್ರೆಗೆ ಹಿನ್ನಡೆ; ಶಿಂಧೆ ಬಣವನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕಳೆದ ವರ್ಷ ನಡೆದ ಶಿವಸೇನೆ ಬಂಡಾಯಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಅವರಿಗೆ ಹಿನ್ನಡೆಯಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಗಿನ ರಾಜ್ಯಪಾಲರ ಕಾನೂನುಬಾಹಿರ ನಿರ್ಧಾರದಿಂದ ಲಾಭ ಗಳಿಸಿದ್ದು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಕಳೆದ ವರ್ಷ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದಕ್ಕಾಗಿ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ನ್ಯಾಯಾಧೀಶರ ದೊಡ್ಡ ಸಮಿತಿಯು ಅದರ ಮೇಲೆ ತೀರ್ಪು ನೀಡುವವರೆಗೆ ಆ ಅಧಿಕಾರವು […]

ಎಕ್ಸಿಟ್ ಪೋಲ್ ವರದಿ ಸುಳ್ಳಾಗಲಿದೆ; ಭಾರತೀಯ ಜನತಾ ಪಕ್ಷ ಸರಕಾರ ರಚಿಸಲಿದೆ: ಶೋಭಾ ಕರಂದ್ಲಾಜೆ

ಬೆಂಗಳೂರು: ಎಕ್ಸಿಟ್ ಪೋಲ್ ಸಮೀಕ್ಷಾ ವರದಿ ಸುಳ್ಳಾಗಲಿದೆ. ಭಾರತೀಯ ಜನತಾ ಪಕ್ಷ ಈ ಬಾರಿ ಸರಕಾರ ರಚಿಸಲಿದೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿದರು. ಗುರುವಾರ ನಗರದ ಕ್ಯಾಪಿಟಲ್ ಹೋಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ಉತ್ಸಾಹದ ಮತದಾನ, ಬೂತ್‍ಗಳಲ್ಲಿ ನಮಗೆ ಕಂಡು ಬಂದ ವರದಿಗಳು ಇದಕ್ಕೆ ಕಾರಣ. ನಮ್ಮ ಕಾರ್ಯಕರ್ತರ ಸಮೀಕ್ಷೆ ಆಧಾರದಲ್ಲಿ ನೂರಕ್ಕೆ 100 ಬಿಜೆಪಿ ಬಹುಮತದ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಸಂಪನ್ನ

ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ದ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 9 ರಂದು ಶ್ರೀ ಮನ್ಮಹಾರಥೋತ್ಸವವು‌ ಮೂಕಾಂಬಿಕೆಯ ಸನ್ನಿಧಿಯಲ್ಲಿ ನಡೆಯಿತು. ಅಪರಾಹ್ನ 12:15 ರ ಸುಮಾರಿಗೆ ರಥಾರೋಹಣಕ್ಕೆ ಚಾಲನೆ ನೀಡಲಾಗಿದ್ದು, ಮಹಾದ್ವಾರದ ಮುಂಬಾಗಿಲಿನಿಂದ ಹೊರಟ ರಥವು ಸಂಜೆ 5:30 ಕ್ಕೆ ಮೆರವಣಿಗೆ ಮೂಲಕ ಓಲಗ ಮಂಟಪ ತಲುಪಿತು. ಮೆರವಣಿಗೆಯ ದಾರಿಯುದ್ದಕ್ಕೂ ವಿವಿಧ ರೀತಿಯ ಕಲಾ ತಂಡಗಳೂ ಪಾಲ್ಗೊಂಡವು. ತಂತ್ರಿಗಳಾದ ಡಾ. ಕೆ. ಎನ್. ನಿತ್ಯಾನಂದ ಅಡಿಗರ ನೇತೃತ್ವದಲ್ಲಿ ನಡೆದಂತಹ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬ್ರಹ್ಮರಥದ ವಿಧಿವಿಧಾನ […]

ಬಹುನಿರೀಕ್ಷಿತ ಹ್ಯುಂಡೈ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಪ್ರಾರಂಭ: ಆರಂಭಿಕ ದರ 6 ಲಕ್ಷ ರೂ

ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರಾರಂಭ ಮಾಡಿದ್ದು, ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಸಮೀಪದ ಡೀಲರ್‌ ಗೆ ಭೇಟಿ ನೀಡಿ ರೂ.11,000 ಪಾವತಿಸಿ, ಕಾರಿನ ಬುಕಿಂಗ್ ಅನ್ನು ಕಾಯ್ದಿರಿಸಬಹುದಾಗಿದೆ. ಹಬ್ಬದ ಋತುವಿನಲ್ಲಿ ‘ಎಕ್ಸ್‌ಟರ್’ ಎಸ್‌ಯುವಿಯನ್ನು ರಸ್ತೆಗಿಳಿಸಲು ಕಂಪನಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯಳು ಹ್ಯುಂಡೈ ಎಕ್ಸ್‌ಟರ್ ಅನ್ನು ವಿನ್ಯಾಸ ಮಾಡಲಾಗಿದ್ದು, ಮುಂಭಾಗವು ಹೆಚ್ ಆಕಾರದ LED DRLs ಜೊತೆ […]

ದಿ ಕೇರಳ ಸ್ಟೋರಿ: ಆರನೇ ದಿನದಂದು 68.86 ಕೋಟಿ ರೂ ಗಳಿಕೆ

ಕೇರಳದ ಹಿಂದೂ ಮಹಿಳೆಯ ಮತಾಂತರ ಮತ್ತು ಭಯೋತ್ಪಾದಕ ಸಂಘಟನೆ ಐಸಿಸ್ ಸುತ್ತ ಸುತ್ತುವ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಲಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದ್ದು, ಆರನೇ ದಿನಕ್ಕೆ 60 ಕೋಟಿ ಮೈಲಿಗಲ್ಲನ್ನು ದಾಟಿದೆ. ಸುದೀಪ್ತೋ ಸೇನ್ ನಿರ್ದೇಶನ ಹಾಗೂ ವಿಪುಲ್ ಶಾಹ್ ನಿರ್ಮಾಣದ ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿ ಮೊದಲ ದಿನವೇ 8 ಕೋಟಿ ಗಳಿಸಿತ್ತು. ಇದು 2023 ರಲ್ಲಿ ಶಾರುಖ್ ಖಾನ್ […]