ಉಡುಪಿಯ ಆಭರಣ ತಯಾರಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ

ನಗರದ ಮಧ್ಯಭಾಗದಲ್ಲಿನ ಆಭರಣ ತಯಾರಕ ಘಟಕದಲ್ಲಿನ ವಿಷ ಅನಿಲ ಸೋರಿಕೆ ಸ್ಥಳೀಯರಲ್ಲಿ ಭಯ ಮೂಡಿಸಿದೆ . ಇದರ ಹೊಗೆ ಬಹಳ ವಿಷಯುಕ್ತವಾಗಿದ್ದು ನಗರ ಮಧ್ಯ ಭಾಗದಲ್ಲಿ ಈ ರೀತಿಯ ಹರಡುತ್ತಿದ್ದರೂ ನಗರ ಸಭಾ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ . ಹಗಲು ಹೊತ್ತಿನಲ್ಲೂ ಈ ರೀತಿಯ ಹೊಗೆ ಬಿಡುತ್ತಿದ್ದು ಈ ಆಭರಣ ತಯಾರಕ ವರ್ಕ್ ಶಾಪ್ ಬಳಿಯೇ ಪ್ರಾಥಮಿಕ ಸರಕಾರಿ ಶಾಲೆ ಇದ್ದು ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದ್ದು ನಗರದ ಆಭರಣ ತಯಾರಕ ಸಂಸ್ಥೆಯು ಚಿನ್ನಾಭರಣ ತಯಾರಿಸಲು ಹಳೆ ಚಿನ್ನ ಹಾಗೂ ಚಿನ್ನದ ಬಿಲ್ಲೆಗಳನ್ನು ಕರಗಿಸುವಾಗ ಸಲ್ಪರ್ ಉಪಯೋಗಿಸುತ್ತಿದ್ದು , ಇದರಿಂದ ಹೊರ ಸೂಸುವ ವಿಷಾನಿಲ ಪರಿಸರವಿಡೀ ಹರಡಿದೆ . ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ