ಉಡುಪಿ: ಚಿನ್ನ ತಯಾರಿಕಾ ಘಟಕದಲ್ಲಿ ರಾಸಾಯನಿಕ ಹೊಗೆ ಸೊರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಉಡುಪಿ: ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಚಿನ್ನ ತಯಾರಿಕಾ ಘಟಕವೊಂದು ಹೊರಸೂಸುವ ಹೊಗೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು ದೇವಾಲಯ ಮಸೀದಿ ವಸತಿ ಸಮುಚ್ಛಗಳಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ ಇದರ ಹೊಗೆ ಪರಿಸರದಲ್ಲಿ ದಟ್ಟವಾಗಿ ಆವರಿಸಿದ್ದು ರಾಸಾಯನಿಕಯುಕ್ತ ಈ ಹೊಗೆಯಿಂದ ಮೂಗು ಕಣ್ಣು ಉರಿ, ಕೆಮ್ಮು ಕಾಣಿಸುತ್ತಿದೆ. ಇದೇ ರೀತಿಯ ಚಿನ್ನಾಭರಣದ ಘಟಕವೊಂದು ಕೇರಳದ ವಸತಿ ಪ್ರದೇಶದಲ್ಲಿದ್ದ ಕಾರಣಕ್ಕಾಗಿ ಅಲ್ಲಿನ ಸ್ಥಳಿಯ ಆಡಳಿತ ಅದರ ಅನುಮತಿಯನ್ನು ರದ್ದುಗೊಳಿಸಿತ್ತು. ಇದೀಗ […]

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜುಲೈ 25ರಂದು (ಮಂಗಳವಾರ) ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದ್ದು , ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನದಿಗಳು, ಹಳ್ಳಗಳು, ತೋಡುಗಳು ತುಂಬಿ ಹರಿಯುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್ ಗಳು, ನದಿಗಳು ಹಾಗು ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೋ […]

. ಐಬಿಪಿಎಸ್‌ ನೇಮಕಾತಿ; ಕ್ಲರ್ಕ್​ ಹುದ್ದೆಗಳಿಗೆಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಪಂಜಾಬ್​​ ಮತ್ತು ಸಿಂಧ್​ ಬ್ಯಾಂಕ್​ ಮತ್ತು ಬ್ಯಾಂಕ್​ ಆಫ್​ ಇಂಡಿಯಾ ಸೇರಿದಂತೆ ದೇಶದ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿ ಇರುವ ಕ್ಲರ್ಕ್​ ಹುದ್ದೆಗಳ ನೇಮಕಾತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್ (ಐಬಿಪಿಎಸ್‌) ಅರ್ಜಿ ಆಹ್ವಾನಿಸಿದೆ. ಪ್ರತಿ ರಾಜ್ಯವಾರು ಹುದ್ದೆಗಳ ಹಂಚಿಕೆ ಮಾಡಿದ್ದು, ಇದರನುಸಾರ ಕರ್ನಾಟಕಕ್ಕೆ 88 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಬ್ಯಾಂಕಿಂಗ್​ ವಲಯದಲ್ಲಿ ಕಾರ್ಯನಿರ್ವಹಿಸುವ ಇಚ್ಛೆ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಐಬಿಪಿಎಸ್‌ ಪ್ರತಿ ರಾಜ್ಯವಾರು ಹುದ್ದೆಗಳನ್ನು […]

ಚಿಮ್ಮುತ್ತಿದೆ ಗೋಕಾಕ್ ಜಲಪಾತ; ಹರಿದು ಬರುತ್ತಿರುವ ಪ್ರವಾಸಿಗರು

ಬೆಳಗಾವಿ: ಅಮೆರಿಕ ದೇಶದ ಪ್ರಸಿದ್ಧ ನಯಾಗರ ಜಲಪಾತವನ್ನು ಹೋಲುವುದರಿಂದ ಭಾರತದ ನಯಾಗಾರವೆಂದೇ ಕರೆಯಲ್ಪಡುವ ನಯನ ಮನೋಹರ ಗೋಕಾಕ್​ ಫಾಲ್ಸ್ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಶ್ಚಿಮ ಘಟ್ಟದಲ್ಲಿ ಅಕ್ಷರಶಃ ವರುಣರಾಯ ಅಬ್ಬರಿಸುತ್ತಿದ್ದಾನೆ. ಜಿಲ್ಲೆಯ ಘಟಪ್ರಭಾ, ಹಿರಣ್ಯಕೇಶಿ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಅಪಾರ ಪ್ರಮಾಣದ ನೀರು ಗೋಕಾಕ್ ಫಾಲ್ಸ್​ನತ್ತ ಹರಿದುಬರುತ್ತಿದೆ. 170 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ತನ್ನ ರುದ್ರ ರಮಣೀಯ ದೃಶ್ಯವನ್ನು ಪ್ರದರ್ಶಿಸುತ್ತಿದೆ.ಆಕರ್ಷಕ ದೃಶ್ಯ ಕಂಡು ಜನ ಪುಳಕಗೊಳ್ಳುತ್ತಿದ್ದಾರೆ. ಹಾಸುಗಲ್ಲುಗಳ […]

ಉಡುಪಿಯ ಆಭರಣ ತಯಾರಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ

ನಗರದ ಮಧ್ಯಭಾಗದಲ್ಲಿನ ಆಭರಣ ತಯಾರಕ ಘಟಕದಲ್ಲಿನ ವಿಷ ಅನಿಲ ಸೋರಿಕೆ ಸ್ಥಳೀಯರಲ್ಲಿ ಭಯ ಮೂಡಿಸಿದೆ . ಇದರ ಹೊಗೆ ಬಹಳ ವಿಷಯುಕ್ತವಾಗಿದ್ದು ನಗರ ಮಧ್ಯ ಭಾಗದಲ್ಲಿ ಈ ರೀತಿಯ ಹರಡುತ್ತಿದ್ದರೂ ನಗರ ಸಭಾ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ . ಹಗಲು ಹೊತ್ತಿನಲ್ಲೂ ಈ ರೀತಿಯ ಹೊಗೆ ಬಿಡುತ್ತಿದ್ದು ಈ ಆಭರಣ ತಯಾರಕ ವರ್ಕ್ ಶಾಪ್ ಬಳಿಯೇ ಪ್ರಾಥಮಿಕ ಸರಕಾರಿ ಶಾಲೆ ಇದ್ದು ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದ್ದು ನಗರದ ಆಭರಣ ತಯಾರಕ ಸಂಸ್ಥೆಯು […]