ಜ್ಞಾನಸುಧಾದ 37 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್; ವಿಜ್ಞಾನ ವಿಭಾಗದ ಸಮ್ಯಕ್ ಪ್ರಭು ಹಾಗೂ ವಾಣಿಜ್ಯ ವಿಭಾಗದ ಚೈತ್ರ ಕಾಮತ್ ರಾಜ್ಯಮಟ್ಟದಲ್ಲಿ 4ನೇ ರ‍್ಯಾಂಕ್


ಉಡುಪಿ : ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ 2023-24ನೇ ಸಾಲಿನ ದ್ವೀತೀಯ ಪಿಯುಸಿ ಪರೀಕ್ಷೆ -1ರ ಫಲಿತಾಶದಲ್ಲಿ ಜ್ಞಾನಸುಧಾದ ವಿದ್ಯಾರ್ಥಿಗಳು ರಾಜ್ಯಕ್ಕೆ 10ರೊಳಗಿನ 37 ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್ ಪ್ರಭು (595/600) ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರ ಕಾಮತ್(594/600) ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 689 ವಿದ್ಯಾರ್ಥಿಗಳಲ್ಲಿ 663 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಈ ಮೂಲಕ 96% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿಯೂ, ಉಳಿದ 4% ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.99ಕ್ಕಿಂತ ಅಧಿಕ 4 ವಿದ್ಯಾರ್ಥಿಗಳು, ಶೇ.98ಕ್ಕಿಂತ ಅಧಿಕ 36 ವಿದ್ಯಾರ್ಥಿಗಳು, ಶೇ.97ಕ್ಕಿಂತ ಅಧಿಕ 125 ವಿದ್ಯಾರ್ಥಿಗಳು ಶೇ.96ಕ್ಕಿಂತ ಅಧಿಕ 234 ವಿದ್ಯಾರ್ಥಿಗಳು, ಶೇ.95ಕ್ಕಿಂತ ಅಧಿಕ 317 ವಿದ್ಯಾರ್ಥಿಗಳು, ಶೇ.90ಕ್ಕಿಂತ ಅಧಿಕ 579 ವಿದ್ಯಾರ್ಥಿಗಳು ಅಂಕಗಳಿಸಿರುತ್ತಾರೆ.

ಸಮ್ಯಕ್ ಆರ್ ಪ್ರಭು 595 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಖುಷಿ.ಎಸ್.ಹೆಗ್ಡೆ 594 (5ನೇ ರ‍್ಯಾಂಕ್), ಸಂಜನಾ ಪಟಗಾರ್ 594 (5ನೇ ರ‍್ಯಾಂಕ್), ಚಿನ್ಮಯ್.ಎಸ್.ದೇಶಪಾಂಡೆ 593 (6ನೇ ರ‍್ಯಾಂಕ್), ರೋಶ್ನಿ ಎಂ.ಪಿ 593 (6ನೇ ರ‍್ಯಾಂಕ್), ಪ್ರಣವ್ ಕುಮಾರ್ ಭಂಡಿ 592 (7ನೇ ರ‍್ಯಾಂಕ್), ರಕ್ಷಣ್ ಆರ್ 592 (7ನೇ ರ‍್ಯಾಂಕ್), ಅಮೃತ ಶಾಂತರಾಮ್ ಶೆಟ್ಟಿ 592 (7ನೇ ರ‍್ಯಾಂಕ್), ಶ್ರೀಧ ಕಾಮತ್ 592 (7ನೇ ರ‍್ಯಾಂಕ್), ಚಿನ್ಮಯ್ ಎಂ.ಬಿ. 591 (8ನೇ ರ‍್ಯಾಂಕ್), ಕೃಷ್ ಎಸ್. ಕೆ. 591 (8ನೇ ರ‍್ಯಾಂಕ್), ಕೃಷ್ಣ ಗಣಪತಿ ಭಟ್ 591 (8ನೇ ರ‍್ಯಾಂಕ್), ಸಂಪದ ಇಂಚಾಲ್ 591 (8ನೇ ರ‍್ಯಾಂಕ್), ಸಂಜನಾ ಆರ್ ರಾವ್ 591 (8ನೇ ರ‍್ಯಾಂಕ್), ತನ್ಮಯ್ ಶೆಟ್ಟಿ 591 (8ನೇ ರ‍್ಯಾಂಕ್), ತಿಲಕ್ ಚಂದ್ರ 591 (8ನೇ ರ‍್ಯಾಂಕ್), ಬಿಪಿನ್ ಜೈನ್ 591(8ನೇ ರ‍್ಯಾಂಕ್), ನಿಧಿ ಪಿ ಶರ್ಮಾ 591 (8ನೇ ರ‍್ಯಾಂಕ್), ಕೆ.ಅನಿರುದ್ದ್ ಕಾಮತ್ 590 (9ನೇ ರ‍್ಯಾಂಕ್), ವೈಭವ್ ವಾಲಿ 590 (9ನೇ ರ‍್ಯಾಂಕ್), ಭಾಗ್ಯಲಕ್ಮೀ ಶೆಟ್ಟಿ 590 (9ನೇ ರ‍್ಯಾಂಕ್), ಚಂದನಾ ಗಂಗಾಧರ್ ನಾಯಕ್ 589 (10ನೇ ರ‍್ಯಾಂಕ್), ಸಮೀಕ್ಷಾ ಶಿವ ಶಂಕರ್ 589 (10ನೇ ರ‍್ಯಾಂಕ್), ಸಮ್ಮಿತ್ ಯು.ಕೆ 589 (10ನೇ ರ‍್ಯಾಂಕ್), ಆಧ್ಯ ವಿ. ಬಲ್ಲು 589 (10ನೇ ರ‍್ಯಾಂಕ್), ಅಮೃತ್ ಆರ್ 589(10ನೇ ರ‍್ಯಾಂಕ್), ಆರ್ಯ ಎಂ.ಜಿ 589 (10ನೇ ರ‍್ಯಾಂಕ್), ಶ್ರೇಯಸ್ ಎಸ್ 589(10ನೇ ರ‍್ಯಾಂಕ್) ಆರ್.ಎಚ್.ಶ್ರಾವಣಿ ತಂತ್ರಿ 589 (10ನೇ ರ‍್ಯಾಂಕ್), ರಿಯಾ ಆಳ್ವಾ 589 (10ನೇ ರ‍್ಯಾಂಕ್) ಪಡೆದಿರುತ್ತಾರೆ.

ವಾಣಿಜ್ಯ ವಿಭಾಗ :

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 57 ವಿದ್ಯಾರ್ಥಿಳಲ್ಲಿ 49 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶೇ.98ಕ್ಕಿಂತ ಅಧಿಕ 6 ವಿದ್ಯಾರ್ಥಿಗಳು, ಶೇ.96ಕ್ಕಿಂತ ಅಧಿಕ 19 ವಿದ್ಯಾರ್ಥಿಗಳು, ಶೇ.95 ಕ್ಕಿಂತ ಅಧಿಕ 25 ವಿದ್ಯಾರ್ಥಿಗಳು, ಶೇ.90 ಗಿಂತ ಅಧಿಕ ಅಂಕಗಳಿಸಿದ 40 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ.

ಚೈತ್ರಾ ಕಾಮತ್ 594 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿದ್ದು, ಶ್ರವಣ್ 590 (8ನೇ ರ‍್ಯಾಂಕ್), ಪೂಜಾರಿ ಶ್ರೇಯಾ ಪ್ರಶಾಂತ್ 590 (8ನೇ ರ‍್ಯಾಂಕ್), ಚಂದನ್ ಎ.ಎಂ 589, ಸುವಿಕ್ಷಾ ಎಸ್ ಶೆಟ್ಟಿ 588(10ನೇ ರ‍್ಯಾಂಕ್), ವೈಷ್ಣವಿ ಶೆಣೈ 588 (10ನೇ ರ‍್ಯಾಂಕ್), ಶ್ರಾವಣಿ 588(10ನೇ ರ‍್ಯಾಂಕ್) ಗಳಿಸುವುದರ ಜೊತೆಗೆ ಸುಜಲ್ ಡಿ. ಹೆಗ್ಡೆ 587, ಸಮಿಯಾ ಎಸ್ ಹೆಗ್ಡೆ 586, ಸನ್ನಿಧಿ ಶೆಟ್ಟಿ 586, ಕೀರ್ತನಾ ರಾವ್ 585, ಪ್ರಣಮ್ ಕರ್ಕೆರಾ 584, ದಿಶಾ ಡಿ. ಪೂಜಾರಿ 582, ಹಯತ್ ನಾಯಕ್ 582 ಅಂಕಗಳಿಸಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಇವರು ಅಭಿನಂದಿಸಿ, ಬೊಧಕ-ಬೋಧಕೇತರ ಸಿಬ್ಬಂಧಿವರ್ಗವನ್ನು ಪ್ರಶಂಸಿಸಿದ್ದಾರೆ.