ಉಡುಪಿ: ಸ್ಟೇಡಿಯಂ ಫ್ರೆಂಡ್ಸ್ ಅಜ್ಜರಕಾಡು-ಉಡುಪಿ ಇದರ ವತಿಯಿಂದ ‘ಸ್ಟೇಡಿಯಂ ಟ್ರೋಫಿ-2021’ ಹೊನಲುಬೆಳಕಿನ ವಾಲಿಬಾಲ್ ಟೂರ್ನ್ ಮೆಂಟ್ ಶನಿವಾರ (ಫೆ. 27) ಅಜ್ಜರಕಾಡಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಟೂರ್ನಿ 21 ವರ್ಷದೊಳಗಿನ (2000 ಜ. 1ರ ನಂತರ ಜನಿಸಿದ) ಬಾಲಕರ ವಿಭಾಗ ಹಾಗೂ ಮುಕ್ತ ಮಹಿಳಾ ವಿಭಾಗದಲ್ಲಿ ಜರಗಲಿದೆ. ಬಾಲಕರ ವಿಭಾಗದಲ್ಲಿ ವಿಜೇತರಾದ ತಂಡಗಳಿಗೆ ಕ್ರಮವಾಗಿ ಪ್ರಥಮ ₹ 11,111 ಸಾವಿರ, ದ್ವಿತೀಯ ₹ 7,777 ಸಾವಿರ ಹಾಗೂ ತೃತೀಯ ₹ 3,333 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು.
ಮಹಿಳಾ ವಿಭಾಗದಲ್ಲಿ ಪ್ರಥಮ ₹ 5,555 ಸಾವಿರ ಮತ್ತು ದ್ವಿತೀಯ ₹ 3,333 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಅಲ್ಲದೆ, ಬೆಸ್ಟ್ ಅಟ್ಯಾಕರ್, ಬೆಸ್ಟ್ ಪಾಸರ್ ಹಾಗೂ ಬೆಸ್ಟ್ ಅಲ್ ಗ್ರೌಂಡರ್ ಪ್ರಶಸ್ತಿಯನ್ನು ಒಳಗೊಂಡಿದೆ.
ಪಂದ್ಯಗಳು ಫೆ. 27ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿದೆ. 300 ಪ್ರವೇಶ ಶುಲ್ಕವನ್ನು ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 99642 79606, 99163 15174 ಸಂಪರ್ಕಿಸಬಹುದು.