ಗ್ರಾಹಕರ ಮುಖ ಕೆಂಪಾಗಿಸುತ್ತಿದೆ ಟೊಮೇಟೋ ಬೆಲೆ: ಕೆಜಿಗೆ100 ರೂ; ಬೆಳೆ ಕುಸಿತದಿಂದಾಗಿ ಬೆಲೆ ಜಿಗಿತ

ನವದೆಹಲಿ: ಹಲವು ದಿನಗಳಿಂದ ಭಾರತವು ಟೊಮೇಟೋ ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಟೊಮೇಟೋ ಬೆಲೆ ಕೇಳಿದರೆನೇ ಗ್ರಾಹಕರ ಮುಖ ಕೆಂಪು ಕೆಂಪಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೋ ಬೆಲೆಯಲ್ಲಿಆತಂಕಕಾರಿ ಏರಿಕೆ ಕಂಡುಬಂದಿದ್ದು, ಪ್ರತಿ ಕಿಲೋಗ್ರಾಂಗೆ 80-120 ರೂ.ಗೆ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಬೆಲೆ ಕಿಲೋಗ್ರಾಂಗೆ 65-70 ಕ್ಕೆ ಏರಿದೆ.

ದೇಶದ ಅನೇಕ ಭಾಗಗಳಲ್ಲಿ ಹೆಚ್ಚಿನ ತಾಪಮಾನ, ಕಡಿಮೆ ಉತ್ಪಾದನೆ ಮತ್ತು ವಿಳಂಬವಾದ ಮಳೆ ಸೇರಿದಂತೆ ಹಲವಾರು ಅಂಶಗಳು ಬೆಲೆಗಳ ಈ ಏರಿಕೆಗೆ ಕೊಡುಗೆ ನೀಡುತ್ತವೆ. ಟೊಮೆಟೊ ಬೆಲೆಯಲ್ಲಿನ ಹಠಾತ್ ಏರಿಕೆಯು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ನ ಹಣದುಬ್ಬರದ ಕಳವಳವನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

ನೆರೆಯ ರಾಜ್ಯಗಳಿಂದ ಟೊಮೇಟೊ ಬರುವುದು ಗಣನೀಯವಾಗಿ ತಗ್ಗಿದೆ ಎಂದು ಸಗಟು ಮಾರುಕಟ್ಟೆಯ ಟೊಮೆಟೊ ವ್ಯಾಪಾರಿ ಅಶೋಕ್ ಖುತ್ವಾಡ್ ವಿವರಿಸುತ್ತಾರೆ. ಇದನ್ನು ಸರಿದೂಗಿಸಲು ಈಗ ಬೆಂಗಳೂರು ಹಾಗೂ ಇತರೆ ನಗರಗಳಿಂದ ಟೊಮೇಟೊ ತರಿಸಿಕೊಳ್ಳಲಾಗುತ್ತಿದೆ. ದುರದೃಷ್ಟವಶಾತ್, ಇತ್ತೀಚಿನ ಮಳೆಯಿಂದಾಗಿ ನೆಲದ ಮೇಲಿನ ಸಸ್ಯಗಳು ಹಾನಿಗೊಳಗಾಗಿ ತಂತಿಗಳಿಂದ ಬೆಂಬಲಿತವಾದ ಲಂಬವಾಗಿ ಬೆಳೆದ ಸಸ್ಯಗಳನ್ನು ಮಾತ್ರ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಕಡಿಮೆ ಮಾರುಕಟ್ಟೆ ಬೆಲೆಗಳು ಅನೇಕ ರೈತರು ಟೊಮೆಟೊ ಕೃಷಿಯನ್ನು ತ್ಯಜಿಸಲು ಪ್ರೇರೇಪಿಸಿತು, ಇದರ ಪರಿಣಾಮವಾಗಿ ಕಡಿಮೆ ಉತ್ಪಾದನೆ ದಾಖಲಾಯಿತು. ರೈತರು ಕೀಟನಾಶಕಗಳನ್ನು ಬಳಸಲು ಅಸಡ್ಡೆ ತೋರಿರುವುದರಿಂದಲೂ ಹೆಚ್ಚಿನ ಬೆಳೆ ನಾಶವಾಗಿದ್ದು ಪೂರೈಕೆ ಕಡಿಮೆಯಾಗಿದೆ. ಅದೃಷ್ಟವಶಾತ್, ಹೊಸ ಪ್ರದೇಶಗಳಲ್ಲಿ ಕೊಯ್ಲು ಪ್ರಾರಂಭವಾಗುವುದರಿಂದ ಮುಂಬರುವ ವಾರಗಳಲ್ಲಿ ಟೊಮೆಟೊ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.