ಪಕ್ಷದ ಘನತೆಗೆ ಧಕ್ಕೆ ತರಬೇಡಿ :ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ವಿಪಕ್ಷ ನಾಯಕನ ಸ್ಥಾನ ಮತ್ತಿತರ ಹುದ್ದೆಗೆ ಸಂಬಂಧಿಸಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ಸಮರ್ಥ ನಿರ್ಧಾರವನ್ನು ಪ್ರಕಟಿಸಲಿದೆ.ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಕ ಕುರಿತು ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೂಚಿಸಿದ್ದಾರೆ. ಪಕ್ಷದ ಆಂತರಿಕ ವಿಷಯಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. […]

ಐಟಿಬಿಪಿಯಲ್ಲಿ 458 ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಗೃಹ ಇಲಾಖೆಯಡಿ ಬರುವ ಇಂಡೋ- ಟಿಬೆಟಿಯನ್​ ಗಡಿ ಭದ್ರತಾ ಪಡೆ (ಐಟಿಬಿಪಿ)ಯಲ್ಲಿ ಖಾಲಿ ಇರುವ 458 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಬಿಪಿಯಲ್ಲಿ 458 ಕಾನ್ಸ್​ಟೇಬಲ್​ (ಡ್ರೈವರ್​) ಹುದ್ದೆ ಮತ್ತು 81 ಹೆಡ್​ಕಾನ್ಸ್​ಟೇಬಲ್​ (ಮಿಡ್​ವೈಫ್​) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್​​ಟೇಬಲ್​ ಡ್ರೈವರ್​ ಹುದ್ದೆಗಳು ಇದಾಗಿದ್ದು, ವಾಹನ ಚಾಲನೆಯಲ್ಲಿ ತರಬೇತಿ ಹೊಂದಿರುವ, ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಹುದ್ದೆಗಳ ವಿವರ: ಕಾನ್ಸ್​ಟೇಬಲ್​ ಡ್ರೈವರ್​​ ಹುದ್ದೆಗೆ ಅಧಿಸೂಚನೆ. ಒಟ್ಟು 458 ಹುದ್ದೆಗಳ ಭರ್ತಿಗೆ ಕ್ರಮ. […]

ಬೀಜಿಂಗ್​ನ ಎಸ್​​​ಸಿಒ ಪ್ರಧಾನ ಕಚೇರಿಯಲ್ಲಿ ‘ನವದೆಹಲಿ ಹಾಲ್​’ ವರ್ಚುವಲ್ ಮೂಲಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉದ್ಘಾಟನೆ

ಬೀಜಿಂಗ್ (ಚೀನಾ): ಭಾರತವು ಮಂಗಳವಾರ ಚೀನಾ ರಾಜಧಾನಿ ಬೀಜಿಂಗ್​ನಲ್ಲಿರುವ ಎಸ್​​​ಸಿಒ ಪ್ರಧಾನ ಕಚೇರಿಯಲ್ಲಿ ತನ್ನ ‘ನವದೆಹಲಿ ಹಾಲ್’ ಉದ್ಘಾಟಿಸಿದೆಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಮೊದಲ ಬಾರಿಗೆ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation – SCO)ಯ ಶೃಂಗಸಭೆ ನಡೆಯಲಿದೆ. ಚೀನಾ ರಾಜಧಾನಿ ಬೀಜಿಂಗ್​ನಲ್ಲಿರುವ ಶಾಂಘೈ ಸಹಕಾರ ಸಂಘಟನೆ ಪ್ರಧಾನ ಕಚೇರಿಯಲ್ಲಿ ಭಾರತದ ‘ನವದೆಹಲಿ ಹಾಲ್​’ ಅನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದರು. ಇದಕ್ಕೂ ಮುಂಚಿತವಾಗಿ ಭಾರತವು ಮಂಗಳವಾರ ಚೀನಾ ರಾಜಧಾನಿ […]

ಒಂದೇ ವರ್ಷದಲ್ಲಿ ಶೇ.14 ಏರಿಕೆ ಕಂಡ ಮಾರಾಟ; ಸ್ವದೇಶಿ ತಯಾರಿಕೆಯ ವಿದೇಶಿ ಎಣ್ಣೆಗೆ ಭಾರಿ ಡಿಮ್ಯಾಂಡ್!

ನವದೆಹಲಿ: ಸ್ವದೇಶಿ ನಿರ್ಮಿತ ವಿದೇಶಿ ಮದ್ಯ (Indian-made foreign liquor – IMFL) ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 385 ಮಿಲಿಯನ್ ಕೇಸ್‌ಗಳಿಗೆ ತಲುಪಿದ್ದು,ಇದೇ ವೇಳೆ, 750 ಎಂಎಲ್​ ಬಾಟಲಿಯ ಪ್ರತಿ 1,000 ರೂ.ಗಿಂತ ಹೆಚ್ಚಿನ ಪ್ರೀಮಿಯಂ ಉತ್ಪನ್ನಗಳ ಬೆಲೆಯ ಮದ್ಯ ಮಾರಾಟದಲ್ಲಿ ಶೇ.48ರಷ್ಟು ಏರಿಕೆಯಾಗಿದೆ. ಮಾರಾಟದಲ್ಲಿ ಶೇ.14ರಷ್ಟು ಹೆಚ್ಚಳವಾಗಿದೆ.2022-23ರ ಆರ್ಥಿಕ ವರ್ಷದಲ್ಲಿನ ಮದ್ಯ ಮಾರಾಟದ ಕುರಿತ ಅಂಕಿ-ಅಂಶಗಳನ್ನು ಭಾರತೀಯ ಮದ್ಯ ಕಂಪನಿಗಳ ಒಕ್ಕೂಟ ಬಹಿರಂಗಪಡಿಸಿದೆ. ಕೋವಿಡ್-19 ಸಾಂಕ್ರಾಮಿಕಕ್ಕಿಂತ ಮೊದಲು ಎಂದರೆ 2019-20ರ ವಿತ್ತೀಯ ವರ್ಷಕ್ಕೆ ಹೋಲಿಸಿದರೆ, […]

ಮಳೆ ಅಭಾವ : ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

ವಿಜಯಪುರ: ನದಿಗೆ ಒಳಹರಿವು ಕಡಿಮೆಯಾಗಿದೆ. ಕೃಷ್ಣಾ ನದಿ ಉಗಮ ಸ್ಥಾನದ ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದೇ ಇರುವುದರಿಂದ ನದಿಗೆ ಒಳಹರಿವು ಇಳಿಕೆಯಾಗಿದೆ.ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ. ಹೀಗಾಗಿ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.ಮಳೆ ಅಭಾವದಿಂದ ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ (ಆಲಮಟ್ಟಿ ಜಲಾಶಯ) ದಿನ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಕೃಷ್ಣಾ […]