ಕಾಪು ವ್ಯಾಪ್ತಿ ಪ್ರದೇಶದಲ್ಲಿ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: 26 ಪ್ರಕರಣ ದಾಖಲು

ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು
ನಿಯಂತ್ರಣ ತನಿಖಾ ದಳದ ವತಿಯಿಂದ ಕಾಪು ವ್ಯಾಪ್ತಿ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4 ಅಡಿಯಲ್ಲಿ 14 ಹಾಗೂ ಸೆಕ್ಷನ್ 6(ಎ) ಅಡಿಯಲ್ಲಿ 12 ಪ್ರಕರಣ ಸೇರಿದಂತೆ ಒಟ್ಟು 26 ಪ್ರಕರಣ ದಾಖಲಿಸಿ, ಹೋಟೆಲ್ ಮತ್ತು ಅಂಗಡಿಗಳಲ್ಲಿ ಆಹಾರ ಪರವಾನಿಗೆಯನ್ನು ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್ ರಾವ್, ಹಿರಿಯ ಆಹಾರ ಸುರಕ್ಷತಾಧಿಕಾರಿ ವೆಂಕಟೇಶ್, ಕಾರ್ಮಿಕ ಇಲಾಖೆಯ ಶ್ರೀಕಾಂತ್ ನಾಯಕ್, ಅಸಾಂಕ್ರಾಮಿಕ ರೋಗಗಳ ಘಟಕದ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ. ಅಂಜಲಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು, ಕಾಪು ಪೊಲೀಸ್ ಠಾಣೆಯ ಗಣೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.