ಕೆರ್ವಾಶೆ: ವ್ಯಕ್ತಿ ನಾಪತ್ತೆ

ಕೆರ್ವಾಶೆ: ಗೇರುಬೀಜ ಫ್ಯಾಕ್ಟರಿಗೆ ಹೋಗುವುದಾಗಿ ತಿಳಿಸಿ ಹೋದ ವ್ಯಕ್ತಿಯೊಬ್ಬರು ಬಳಿಕ ಮನೆಗೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ನಡೆದಿದೆ. ಕೆರ್ವಾಶೆ ಗ್ರಾಮದ ಅನುಷಾ ಎಂಬರ ಗಂಡ 37 ವರ್ಷ ಪ್ರಾಯದ ಮಹೇಶ್ ಶೆಟ್ಟಿ ನಾಪತ್ತೆಯಾದ ವ್ಯಕ್ತಿ. ಇವರು ಗೇರುಬೀಜ ಕಟ್ಟಿಂಗ್ ಮಾಡುವ ಹಾಗೂ ಹೋಟೆಲ್ ಗಳಿಗೆ ನೀರು ದೋಸೆ ತಯಾರಿಸಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಜೂ.15ರಂದು ಬೆಳಿಗ್ಗೆ 9:45ಕ್ಕೆ ಗೇರುಬೀಜ ಪ್ಯಾಕ್ಟರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಈವರೆಗೂ ಮನೆಗೆ […]

ಅಮಾಸೆಬೈಲು: ಮಹಿಳೆ ನೇಣಿಗೆ ಶರಣು

ಅಮಾಸೆಬೈಲು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯ ಬಳಿಯ ಕೊಟ್ಟಿಗೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮಾಸೆಬೈಲು ಗ್ರಾಮದ ಗೋಳಿಕಾಡು ಎಂಬಲ್ಲಿ ಜೂ.16ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತರನ್ನು ಗೋಳಿಕಾಡು ನಿವಾಸಿ 58 ವರ್ಷದ ರತಿ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಕೆಲವು ವರ್ಷಗಳಿಂದ ಕೈ ಕಾಲು, ಗಂಟು ನೋವು ಹಾಗೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಜೂ.15ರ ರಾತ್ರಿ 11ಗಂಟೆಯಿಂದ ಜೂ. 16ರ ಬೆಳಿಗ್ಗೆ 7 ಗಂಟೆಯ ಮಧ್ಯಾವಧಿಯಲ್ಲಿ ನೇಣುಬಿಗಿದುಕೊಂಡು […]

ಹಿರಿಯಡಕ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಹಾಡಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ಹಿರಿಯಡಕ: ನಾಲ್ಕು ದಿನಗಳ ಹಿಂದೆ ಹಿರಿಯಡ್ಕದ ಕೋಟ್ನಕಟ್ಟೆಯಿಂದ ನಾಪತ್ತೆಯಾಗಿದ್ದ 67 ವರ್ಷದ ಬಿ. ಪ್ರಕಾಶ  ಪೈ ಅವರ ಮೃತದೇಹ ಕುಕ್ಕೆಹಳ್ಳಿಯ ಹಾಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ವಿಷದ ಬಾಟಲಿ ಪತ್ತೆಯಾಗಿದ್ದು, ಪ್ರಕಾಶ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಜೂ‌.13ರಂದು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಡಾ. ಆರ್.ಎನ್ ಭಟ್ ಅವರ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ಹೋಗಿದ್ದ ಪ್ರಕಾಶ […]

ಬ್ರಹ್ಮಾವರ: ಕೋಟ್ಪಾ ಕಾಯ್ದೆಯಡಿ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ, 44 ಪ್ರಕರಣ ದಾಖಲು

ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಬ್ರಹ್ಮಾವರ ತಾಲೂಕಿನ ಬಾರ್ಕೂರು ಹಾಗೂ ಕಾಲೇಜಿನ ಸುತ್ತಮುತ್ತ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 44 ಪ್ರಕರಣ ದಾಖಲಿಸಿ, 5750 ರೂ. ದಂಡ ವಸೂಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ […]

ಭಾರತದ ರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿ, ಫಾರೂಕ್ ಅಬ್ದುಲ್ಲಾ ಹೆಸರು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ

ನವದೆಹಲಿ: ಜುಲೈ 18 ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಚರ್ಚಿಸಲು 17 ಪಕ್ಷಗಳ ಜಂಟಿ ಪ್ರತಿಪಕ್ಷದ ಮೊದಲ ಸಭೆ ಬುಧವಾರ ಸಂಜೆ ಕೊನೆಗೊಂಡಿದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ವಿನಂತಿಸಿದ್ದರೂ ಶರದ್ ಪವಾರ್ ಈ ಸ್ಪರ್ಧೆಯಿಂದ ಹಿಂದೆ ಸರಿದದ್ದರಿಂದ ಪ್ರತಿಪಕ್ಷ ನಾಯಕಿ ಮಮತಾ ಬ್ಯಾನರ್ಜಿ ಗೋಪಾಲ ಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದ್ದಾರೆ. ಅದಾಗ್ಯೂ, ಈ ಎರಡು ಹೆಸರುಗಳಲ್ಲಿ ಒಮ್ಮತದ […]