ಆಂಧ್ರಪ್ರದೇಶ ಫೋಟೋಗ್ರಫಿ ಅಕಾಡೆಮಿ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಪಂಚ ಛಾಯಾಗ್ರಾಹಕರ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಚಾಯಾಗ್ರಾಹಕರು ಕಳುಹಿಸಿದ ಚಿತ್ರಕ್ಕೆ ಬಹುಮಾನ ಲಭಿಸಿದೆ.
ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಮೂಡಬಿದ್ರೆಯ ಮಾನಸ ಫೋಟೋಗ್ರಫಿಯ ರವಿ ಕೋಟ್ಯಾನ್, ಜಿನೇಶ್ ಪ್ರಸಾದ್ ಬೆಂಗಳೂರಿನ ಸತೀಶ್ ಎಚ್ ಮತ್ತು ಶಿವು ಇವರ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ. 75 ಚಿತ್ರಗಳ ಕಾಫಿಟೇಬಲ್ ಪುಸ್ತಕವನ್ನು ಹೊರತರಲಿದ್ದು, ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅಕಾಡೆಮಿ ತಿಳಿಸಿದೆ.












