ಆ.19ರಂದು ಸಹಾಯ ಸೌಹಾರ್ದ ಸಹಕಾರಿಯ ನೂತನ ತೆಂಕನಿಡಿಯೂರು ಶಾಖೆ ಉದ್ಘಾಟನೆ

ಉಡುಪಿ: ಉಡುಪಿ ಸಂತೆಕಟ್ಟೆಯ ಸಹಾಯ ಸೌಹಾರ್ದ ಸಹಕಾರಿ ನಿ. ಇದರ 3 ನೇ ತೆಂಕನಿಡಿಯೂರಿನ ಶಾಖೆಯ ಉದ್ಘಾಟನಾ ಸಮಾರಂಭವು ಅಗಸ್ಟ್ 19 ಶುಕ್ರವಾರ, ಪೂರ್ವಾಹ್ನ ಗಂಟೆ 10ಕ್ಕೆ “ಬೃಂದಾವನ ಆರ್ಕೇಡ್” ತೆಂಕನಿಡಿಯೂರು, ಮಲ್ಪೆಯಲ್ಲಿ ನಡೆಯಲಿದೆ. ಶಾಖೆಯ ಉದ್ಘಾಟನೆಯನ್ನು ಶ್ರೀ ಕೆ. ರಘುಪತಿ ಭಟ್, ವಿಧಾನಸಭಾ ಸದಸ್ಯರು, ಉಡುಪಿ ಕ್ಷೇತ್ರ ನಡೆಸಲಿದ್ದು, ಆಶೀರ್ವಚನವನ್ನು ವಂ.ರೆ.ಫಾ| ಡೆನಿಸ್ ಡೆಸಾ, ಧರ್ಮ ಗುರುಗಳು, ಸೈಂಟ್ ಆನ್ಸ್ ಚರ್ಚ್, ತೊಟ್ಟಂ. ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಲೇರಿಯನ್ ಆರ್. ಫೆರ್ನಾಂಡಿಸ್, ಅಧ್ಯಕ್ಷರು, ಸಹಾಯ […]

ಸುಳ್ಳು ಸುದ್ದಿ, ಭಾರತ ವಿರೋಧಿ ದ್ವೇಷ ವಿಷಯಕ್ಕಾಗಿ 8 ಯೂಟ್ಯೂಬ್ ಹಾಗೂ 1 ಫೇಸ್ ಬುಕ್ ಖಾತೆಯನ್ನು ನಿರ್ಬಂಧಿಸಿದ ಕೇಂದ್ರ

ನವದೆಹಲಿ: ಸುಳ್ಳು ಸುದ್ದಿ, ಭಾರತ ವಿರೋಧಿ ದ್ವೇಷ ಪೂರಿತ ವಿಷಯಗಳನ್ನು ಪ್ರಸಾರಮಾಡಿದ್ದಕ್ಕಾಗಿ ಪಾಕಿಸ್ತಾನದ ಒಂದು ಸೇರಿದಂತೆ, ಒಟ್ಟು ಎಂಟು ಯೂಟ್ಯೂಬ್ ಚಾನೆಲ್ ಮತ್ತು ಒಂದು ಫೇಸ್ ಬುಕ್ ಖಾತೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2021 ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಆಗಸ್ಟ್ 16 ರಂದು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈ ಚಾನೆಲ್ ಗಳ ಮೇಲೆ ನಿಷೇಧ ಹೇರಿದೆ. ನಿಷೇಧಿತ […]

ಸೆಪ್ಟಂಬರ್ 3 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟಂಬರ್ 3 ರಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ, ಕುಂದಾಪುರ ಹಾಗೂ ಕಾರ್ಕಳದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಪರ್ಧೆಗಳ ವಿವರ: ಪುರುಷರಿಗೆ: 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ ಓಟ, ಉದ್ದ ಜಿಗಿತ, ಎತ್ತರಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110ಮೀ ಹರ್ಡಲ್ಸ್, 4*100ಮೀ ರಿಲೇ, 4*400ಮೀ […]

ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ

ಕಳತ್ತೂರು: ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ಕಳತ್ತೂರು ವತಿಯಿಂದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ವಾಸು ಶೆಟ್ಟಿ ಧ್ವಜಾರೋಹಣ ಮಾಡಿದರು. ಆಡಿಟೋರಿಯಂನ ಮಾಲಕ ಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಿಟೋರಿಯಂನ ನಿರ್ದೇಶಕಿ ಕುಶಲ ಶೇಖರ ಶೆಟ್ಟಿ, ಆನಂದಿ ಶೆಟ್ಟಿ, ದಿವಾಕರ ಶೆಟ್ಟಿ, ದಿನೇಶ್ ಶೆಟ್ಟಿ ಕೊತ್ತಲಂಗಡಿ ಮತ್ತು ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರಂದಾಡಿ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು. ಕಾರ್ಯಕ್ರಮದ ಭಾಗವಾಗಿ ಗ್ರಾಮಸ್ಥರಿಗೆ ಸತ್ಕಾರ ಕೂಟ […]

ಮಂಗಳೂರು: ಸರಕಾರಿ ಉಪಕರಣಾಗಾರದಲ್ಲಿ ಇಲೆಕ್ಟ್ರಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ : ಮಂಗಳೂರಿನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ನಿರ್ವಹಣಾ ವಿಭಾಗದಲ್ಲಿ ಖಾಲಿ ಇರುವ ಇಲೆಕ್ಟ್ರಿಷಿಯನ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಡಿಪ್ಲೋಮಾ ಅಥವಾ ಬಿ.ಇ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 05 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ gttcmng@gmail.com ಅನ್ನು ಅಥವಾ ಪ್ರಾಂಶುಪಾಲರು, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಬೈಕಂಪಾಡಿ ಕೈಗಾರಿಕಾ […]