ಐಸಿಐಸಿಐ ಬ್ಯಾಂಕ್​ಗೆ ₹12 ಕೋಟಿ ದಂಡ ವಿಧಿಸಿದ ಆರ್​ಬಿಐ : ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ

ನವದೆಹಲಿ: ಐಸಿಐಸಿಐ ಬ್ಯಾಂಕ್ ಲಿಮಿಟೆಡ್​ನಲ್ಲಿ ನಿರ್ದೇಶಕರಾಗಿರುವ ಇಬ್ಬರು ವ್ಯಕ್ತಿಗಳು ತಾವೇ ನಿರ್ದೇಶಕರಾಗಿರುವ ಮತ್ತೊಂದು ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದಕ್ಕಾಗಿ ಅಥವಾ ಸಾಲ ಮಂಜೂರಿಗೆ ಯತ್ನಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಐಸಿಐಸಿಐ ಬ್ಯಾಂಕ್​ಗೆ 12.19 ಕೋಟಿ ರೂ.ಗಳ ದಂಡ ವಿಧಿಸಿದೆ.ಸಾಲ ನೀಡುವಿಕೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ 12 ಕೋಟಿ ರೂ. ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯ್ದೆಯ ನಿಬಂಧನೆಗಳು ಮತ್ತು ಬ್ಯಾಂಕಿಂಗ್ ನಿಯಂತ್ರಕ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣ ಐಸಿಐಸಿಐ […]

50 ಲಕ್ಷದ ಗಡಿ ದಾಟಿದ ಭಕ್ತರ ಸಂಖ್ಯೆ ಚಾರ್​ಧಾಮ್​ ಯಾತ್ರೆ 2023

ಡೆಹರಾಡೂನ್​( ಉತ್ತರಾಖಂಡ): ದೇವಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ವಿಶ್ವವಿಖ್ಯಾತ ಉತ್ತರಾಖಂಡದ ಪುಣ್ಯ ಕ್ಷೇತ್ರಗಳಾದ ಚಾರ್ ​ಧಾಮ್​​ನಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಕಂಡು ಬರುತ್ತಿದೆ.ಈ ಬಾರಿಯ ಚಾರ್ ​ಧಾಮ್​ ಯಾತ್ರೆಯಲ್ಲಿ ಭಕ್ತರು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಹೌದು 2023ರ ಪವಿತ್ರ ಯಾತ್ರೆಯಲ್ಲಿ ಭಕ್ತರ ಸಂಖ್ಯೆ 50 ಲಕ್ಷವನ್ನು ದಾಟಿ ಮುನ್ನುಗ್ಗುತ್ತಿದೆ. ಈ ಮೂಲಕ ಹೊಸ ದಾಖಲೆ ಇತಿಹಾಸದ ಪುಟ ಸೇರಿದೆ. ಈ ಬಾರಿಯ ಚಾರ್ ​ಧಾಮ್ ಯಾತ್ರೆಯನ್ನು ಏಪ್ರಿಲ್ 22 ರಂದು ಆರಂಭಿಸಲಾಗಿತ್ತು. ಅಂದಿನಿಂದ […]

ಸೋಷಿಯಲ್​ ಮೀಡಿಯಾದ ವಿಡಿಯೋ ನೋಡಿ ಚಿಕ್ಕೋಡಿಯಲ್ಲಿ ಬಂಗಾರದಂಥ ಬೆಳೆ ಬೆಳೆದ ದಂಪತಿ

ಚಿಕ್ಕೋಡಿ:ಸೋಷಿಯಲ್​ ಮೀಡಿಯಾದ ವಿಡಿಯೋ ನೋಡಿ ಬಂಗಾರದಂಥ ಬೆಳೆ ಬೆಳೆದ ದಂಪತಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ್ ಗ್ರಾಮದ ರೈತ ದಂಪತಿ ಬರಡು ಭೂಮಿಯಲ್ಲಿ ಡ್ರ್ಯಾಗನ್​ ಫ್ರೂಟ್ ಬೆಳೆದು ಕೈ ತುಂಬಾ ಆದಾಯಗಳಿಸಿದೆ. ಈ ಮೂಲಕ ಇತರರಿಗೂ ಮಾದರಿಯಾಗಿದೆ. ಕೃಷಿಯಲ್ಲಿ ಲಾಭವಿಲ್ಲ ಎಂದು ಹೊಲಗದ್ದೆ ಮಾರಿ ಪಟ್ಟಣ – ನಗರ ಪ್ರದೇಶ ಸೇರುವವರ ನಡುವೆ ಇಲ್ಲೊಬ್ಬ ರೈತ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ, ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಉಳಿದ […]

ಇದು ವಾಟ್ಸ್​ಆಯಪ್​ನ ಹೊಸ ಪಾಸ್​ ಕೀ ವೈಶಿಷ್ಟ್ಯ : ಪಾಸ್​ವರ್ಡ್​ ರಹಿತ ಲಾಗಿನ್​!

ನವದೆಹಲಿ: ತನ್ನ ಪ್ಲಾಟ್​ಫಾರ್ಮ್​ನಲ್ಲಿ ಪಾಸ್​ವರ್ಡ್ ಬದಲಾಗಿ ಪಾಸ್​ ಕೀ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ವಾಟ್ಸ್​ಆಯಪ್ ಘೋಷಿಸಿದೆ.ವಾಟ್ಸ್​ಆಪ್ ಇನ್ನು ಮುಂದೆ ಆಂಡ್ರಾಯ್ಡ್​ ಬಳಕೆದಾರರಿಗಾಗಿ ಪಾಸ್​ವರ್ಡ್ ಬದಲು ಪಾಸ್ ಕೀ ವೈಶಿಷ್ಟ್ಯ ಹೊರತರಲಿದೆ. ಪಾಸ್​ ಕೀ ವೈಶಿಷ್ಟ್ಯವನ್ನು ಈ ಹಿಂದೆಯೇ ವಾಟ್ಸ್​ಆಯಪ್ ತನ್ನ ಬೀಟಾ ಚಾನೆಲ್​ನಲ್ಲಿ ಪರೀಕ್ಷಿಸಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ಬಳಕೆದಾರರಿಗೂ ಪರಿಚಯಿಸಲು ವಾಟ್ಸ್​ಆಯಪ್ ಮುಂದಾಗಿದೆ. ಆದರೆ ಐಫೋನ್ ಗಳಲ್ಲಿ ಪಾಸ್​ ಕೀ ವೈಶಿಷ್ಟ್ಯ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆಂಡ್ರಾಯ್ಡ್ […]

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ ನೇಮಕಾತಿ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 17 ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆ ಭರ್ತಿ ಮಾಡಲಾಗುವುದು. ಆಯಾಯ ಗ್ರಾಮ ಅಥವಾ ತಾಲೂಕು ಪಂಚಾಯಿತಿ ನಿವಾಸಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಹುದ್ದೆ ವಿವರ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 17 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಗ್ರಾಮಗಳ ಪಟ್ಟಿ ಇಂತಿದೆ. ಅತಿಕಾರಿ ಬೆಟ್ಟು ಇರುವೈಲ್​, ಇರ್ವತ್ತೂರು, ಕಡಿರುದ್ಯಾವರ, ಕಡ್ಯ – ಕೊಣಾಜೆ, ಕೆಯ್ಯೂರು, ನಿಡ್ಪಳ್ಳಿ, ಬಡಗ ಎಡಪದವು, ಮಣಿನಾಲ್ಕೂರು, […]