ಕೇರಳದ ಹಿಂದೂ ಮಹಿಳೆಯ ಮತಾಂತರ ಮತ್ತು ಭಯೋತ್ಪಾದಕ ಸಂಘಟನೆ ಐಸಿಸ್ ಸುತ್ತ ಸುತ್ತುವ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಲಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದ್ದು, ಆರನೇ ದಿನಕ್ಕೆ 60 ಕೋಟಿ ಮೈಲಿಗಲ್ಲನ್ನು ದಾಟಿದೆ. ಸುದೀಪ್ತೋ ಸೇನ್ ನಿರ್ದೇಶನ ಹಾಗೂ ವಿಪುಲ್ ಶಾಹ್ ನಿರ್ಮಾಣದ ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕೇರಳ ಸ್ಟೋರಿ ಮೊದಲ ದಿನವೇ 8 ಕೋಟಿ ಗಳಿಸಿತ್ತು. ಇದು 2023 ರಲ್ಲಿ ಶಾರುಖ್ ಖಾನ್ ಅವರ ಪಠಾನ್ ನಂತರ ಐದನೇ ಅತಿ ಹೆಚ್ಚು ಓಪನಿಂಗ್ ದಾಖಲಿಸಿದ ಹಿಂದಿ ಚಲನಚಿತ್ರವಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ದಿನ 6, ಮೇ 10 ರಂದು ಬೆಳವಣಿಗೆಯನ್ನು ದಾಖಲಿಸಿದ್ದು, ಬಾಕ್ಸ್ ಆಫೀಸ್ನಲ್ಲಿ 12 ಕೋಟಿ ರೂ.ಗಳಿಸಿ ಒಟ್ಟು ಕಲೆಕ್ಷನ್ 68.86 ಕೋಟಿ ರೂ. ತಲುಪಿದೆ.