ಬಾರಕೂರು: ಮೇ 20 ಶುಕ್ರವಾರದಂದು ಬೆಳಿಗ್ಗೆ 11.30 ಕ್ಕೆ ಬಾರಕೂರಿನ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಪ್ರಾರಂಭಗೊಂಡ ಶ್ರೀ ಕಾಸನಾಡಿ ಸಿಟಿ ಟವರ್ ಕಟ್ಟಡದ ಉದ್ಘಾಟನಾ ಸಮಾರಂಭವು ನೆರವೇರಿತು.
ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಶಾಂತರಾಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎನ್. ಬಸವ ಶೆಟ್ಟಿ, ಮುಕ್ತೇಸರರು, ಕಾಸನಾಡಿ ಚಿಕ್ಕು ದೇವಸ್ಥಾನ, ನಾಗರಮಠ, ಬಾರಕೂರು, ರಾಘವಾ ಶೆಟ್ಟಿ ಚಾಂಪಾಡಿ, ಅಧ್ಯಕ್ಷರು, ಹೊಸಾಳ ಗರಡಿ ಜೀರ್ಣೋದ್ಧಾರ ಸಮಿತಿ, ಬಾರಕೂರು, ಬಿ. ಭುಜಂಗ ಶೆಟ್ಟಿ, ಬಾರಕೂರು, ಉದ್ಯಮಿಗಳು, ಹುಬ್ಬಳ್ಳಿ, ಬಿ. ಗಣೇಶ್, ಸಿಇಒ, ಬಾರಕೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಹಾಸ್ಯ ಕಲಾವಿದ ಮನು ಹಂದಾಡಿ ಭಾಗವಹಿಸಿದ್ದರು.
ಶ್ರೀಮತಿ ವೀಣಾ ಮತ್ತು ಶ್ರೀಧರ ಶೆಟ್ಟಿ ಹಳೆಮನೆ ಒಳಬೈಲು, ನಾಗರಮಠ ಶ್ರೀಮತಿ ಶಾರದ ರಾಜೀವ ಶೆಟ್ಟಿ ಹಳೆಮನೆ ಒಳಬೈಲು, ನಾಗರಮಠ ಶ್ರೀಮತಿ ಕಮಲಾ ಮತ್ತು ಬೇಳೂರು ಭುಜಂಗ ಶೆಟ್ಟಿ, ಹೋಟೆಲ್ ಹರಿಪ್ರಸಾದ್, ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಕಾಸನಾಡಿ ಸಿಟಿ ಟವರ್ ನಲ್ಲಿ ಸೀಮಿತ ಅಂಗಡಿಗಳು ಲಭ್ಯವಿದ್ದು, ಆಸಕ್ತರು ದೂ. ಸಂಖ್ಯೆ: 9972212349/9606324069 ಅನ್ನು ಸಂಪರ್ಕಿಸಬಹುದು.