ಆಟಕುಂಟು ಲೆಕ್ಕಕಿಲ್ಲದ ಸರಕಾರದ ನಿಯಮ ಮಕ್ಕಳ ಭವಿಷ್ಯಕ್ಕೆ ಬೀಳಲಿದೆ ಅಡ್ಡ ಪರಿಣಾಮ – ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಉಡುಪಿ: ಹಿಂದಿ ಕಲಿಕೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ..ಜನಸಾಮಾನ್ಯರ ಬದುಕಿನ ಮೇಲಿನ ಚೆಲ್ಲಾಟ? ಇದಾಗಲೇ ಕನಾ೯ಟಕ ಸರಕಾರದ ಮುಂದೆ ದ್ವಿ ಭಾಷಾ ನೀತಿ ಅಳವಡಿಕೆಯ ಕುರಿತಾಗಿ ವರದಿ ನೀಡಿದೆ.ಇದೇ ಹಿನ್ನೆಲೆಯಲ್ಲಿ ಕನಾ೯ಟಕ ರಾಜ್ಯ ಸರ್ಕಾರ ಕೂಡಾ ಈ ದ್ವಿ ಭಾಷಾ ನೀತಿಗೆ ಮಣೆ ಹಾಕುವ ನಿಧಾ೯ರಕ್ಕೆ ಸಹಮತಿ ನೀಡಿರುವುದು ರಾಷ್ಟ್ರಿಯತೆಯ ದೃಷ್ಟಿಯಿಂದ ಅತ್ಯಂತ ಕೆಟ್ಟ ನಿಧಾ೯ರ ಮೇಲ್ನೋಟಕ್ಕೆ ಸ್ವಷ್ಟವಾಗಿಕಾಣುತ್ತಿದೆ.ಇದನ್ನು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡ ಬೇಕಾದ ಅನಿವಾರ್ಯತೆ ಇದೆ.
ಇದೇ ಸಂದರ್ಭದಲ್ಲಿ ಈ ದ್ವಿ ಭಾಷಾ ನೀತಿಯಿಂದ ರಾಜ್ಯ ದಲ್ಲಿ ಹಿಂದಿ ಭಾಷಾ ಕಲಿಕೆ ಆಟಕ್ಕೆ ಉಂಟುಲೆಕ್ಕಕ್ಕೆ ಇಲ್ಲ ಅನ್ನುವ ಸ್ಥಿತಿಗೆ ತಂದಿರುವುದಂತೂ ಸತ್ಯ.ಇದರಿಂದಾಗಿ ನೇರವಾಗಿ ಪರಿಣಾಮವಾಗಿ ಬೀರುವುದು ಬಡ ಮತ್ತು ಮಧ್ಯಮ ವಗ೯ದ ಬದುಕಿನ ಮೇಲೆ ಅನ್ನುವುದು ನಮ್ಮ ಸರ್ಕಾರಕ್ಕೆ ಇನ್ನೂ ಮನವರಿಕೆ ಆಗದಿರುವುದು ಆಶ್ಚರ್ಯವೇ ಸರಿ.ಇದು ಹೇಗೆ ಬಡವರ ಮಧ್ಯಮವಗ೯ದವರ ಬದುಕು ಹಾಗೂ ಉದ್ಯೋಗದ ಮೇಲೆ ಹೇಗೆ ನೇರವಾಗಿ ಹೇಗೆ ಪರಿಣಾಮ ಬೀರ ಬಹುದು ಮಾತ್ರವಲ್ಲ ದ್ವಿ ಭಾಷಾ ನೀತಿ ಸಿರಿವಂತರ ಮಕ್ಕಳ ಬದುಕಿಗೆ ವರದಾನವೂ ಆಗ ಬಹುದು ಅನ್ನುವುದರ ಕುರಿತಾಗಿಯೇ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ.
ದ್ವಿ ಭಾಷಾ ನೀತಿಯಂತೂ ಕನ್ನಡ ಭಾಷಾ ಬೆಳವಣಿಗೆ ಪೂರಕವಾಗಿ ನಿಲ್ಲುವುದಿಲ್ಲ.ಬದಲಾಗಿ ಆಂಗ್ಲ ಭಾಷಾ ಮಾಧ್ಯಮವೇ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುದಂತು ಸತ್ಯ.ಕಲಿಕೆಯಲ್ಲಿ ಬುದ್ಧಿವಂತರು ಆಥಿ೯ಕವಾಗಿ ಪ್ರಬಲರು ಆಂಗ್ಲ ಭಾಷಾಯಲ್ಲಿಯೇ ಕಲಿತು ಪ್ರಾವೀಣ್ಯತೆಯನ್ನು ಪಡೆದು ಉತ್ತಮ ಉದ್ಯೇೂಗವನ್ನು ಖಾಸಗಿ ಕಂಪನಿಗಳಲ್ಲಿ ಸುಲಭವಾಗಿ ಪಡೆದು ದೇಶ ವಿದೇಶಗಳಲ್ಲಿ ಉತ್ತಮ ಬದುಕನ್ನು ಕಟ್ಟಿ ಕೊಳ್ಳ ಬಹುದು.ಇವರಿಗೆ ಹಿಂದಿ ಭಾಷಾ ಜ್ಞಾನದ ಅನಿವಾರ್ಯತೆ ಹೆಚ್ಚಾಗಿ ಕಾಡಲಾರದು.ಯಾಕೆಂದರೆ ಇವರಿಗೆ ಸಾಮಾಜಿಕವಾಗಿ ಬೆರೆತು ಬದುಕುವ ಅಗತ್ಯವೂ ಬರಲಾರದು.ಅದೇ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದು ಬಡ ಮಾಧ್ಯಮ ವಗ೯ದವರು ತಮ್ಮ ಬದುಕನ್ನು ಕಟ್ಟಿ ಕೊಳ್ಳಲು ಬರೇ ರಾಜ್ಯದೊಳಗೆ ಸಾಧ್ಯವಿಲ್ಲ.ಹಾಗಾಗಿ ಅವರು ಬೇರೆ ರಾಜ್ಯಗಳಿಗೊ ಮಧ್ಯಪ್ರಾಚ್ಯ ದೇಶಗಳಿಗೊ ಹೇೂಗಿ ಸಣ್ಣಪುಟ್ಟವ್ಯವಹಾರವನ್ನೊ ಉದ್ಯೋಗವನ್ನು ಪಡೆದು ಜನರ ಜೊತೆ ವ್ಯವಹಾರಿಸ ಬೇಕಾದರೆ ಹಿಂದಿ ಭಾಷೆಯಿಂದ ಸಾಧ್ಯವೆನ್ನುವುದು ನಮ್ಮೆಲ್ಲರ ಅನುಭವಕ್ಕೆ ಇದಾಗಲೇ ಬಂದಿದೆ.ಹಾಗೆನ್ನುವಾಗ ರಾಜ್ಯದಲ್ಲಿ ಹಿಂದಿ ಭಾಷೆಯ ಕಲಿಕೆ ನಿಷೇಧ ಹೇರಿರುವುದು ಬಡ ಮಧ್ಯಮ ವಗ೯ದವರ ಬದುಕಿನ ಮೇಲೆ ಚೆಲ್ಲಾಟವಲ್ಲವೇ.ಇದರ ವಿರುದ್ಧ ಧ್ವನಿ ಎತ್ತುವ ಸಂಘಟನೆಗಳ ಕೊರತೆ ಎದ್ದು ಕಾಣುತ್ತದೆ.
ನಮ್ಮ ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಅದರಲ್ಲೂ ಖಾಸಗೀ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಹಿಂದಿ ಭಾಷೆಯನ್ನೆ ಆಯ್ಕೆ ಮಾಡಿಕೊಂಡಿರುವರ ಸಂಖ್ಯೆ ಜಾಸ್ತಿ ಇದೆ ಅನ್ನುವುದನ್ನು ನಾವು ಮರೆಯುವಂತಿಲ್ಲ.ಇಂಗ್ಲಿಷ್ ಮಾಧ್ಯಮದ ಪ್ರಭಾವದಿಂದ ಹಿಂದಿ ಬೆಳೆದಿದೆ.ಹಾಗಾದರೆ ಅಷ್ಟು ತಾಕತ್ತು ಇದ್ದರೆ ಇಂಗ್ಲಿಷ್ ಭಾಷೆಯನ್ನು ಮುಟ್ಟಿ ನೇೂಡೇೂಣ? ಹಿಂದಿ ಭಾಷೆಯನ್ನು ಕಲಿಯ ಬೇಕೊ ಬೇಡವೊ ಎಂದು ನಿಧ೯ರಿಸುವುದು ಹೆತ್ತವರ ಮಗುವಿನ ಸಂವಿಧಾನಿಕ ಹಕ್ಕು.ಇದು ಸರ್ಕಾರದ ಹಕ್ಕಲ್ಲ ಅನ್ನುವ ಪರಿಜ್ಞಾನ ನಮ್ಮನ್ನು ಆಳುವ ಸರಕಾರಕ್ಕೆ ಬೇಕು.ಸದ್ಯಕ್ಕೆ ಕನ್ನಡ ಉಳಿಸಿ ಉದ್ದಾರ ಮಾಡುತ್ತೇವೆ ಅನ್ನುವ ಸಂಘಟನೆಗಳಿಗೆ ಈ ದ್ವಿ ಭಾಷಾ ನೀತಿ ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರ ಬಹುದು ಅನ್ನುವ ಪರಿ ಜ್ಞಾನವೂ ಅವರಿಗಿಲ್ಲದಿರುವುದು ಅಷ್ಟೇ ಸ್ವಷ್ಟ.ಇದಕ್ಕೆ ಮಣವ ಹಾಕುವ ಕೆಲಸ ಸರ್ಕಾರ ಮಾಡ ಬಾರದು.ಹಾಗಾದರೆ ಪಾಸು ಫೈಲು ಲೆಕ್ಕಾಚಾರದಲ್ಲಿ ವಿಷಯಗಳ ಭವಿಷ್ಯ ನಿಧ೯ರಿಸುವುದೇ ಅದರೆ ಲೆಕ್ಕದ ವಿಷಯವನ್ನುಕೂಡ ಲೆಕ್ಕಕ್ಕೆ ಇಲ್ಲ ಆಟಕ್ಕೆ ಉಂಟುಮಾಡಿ ನೇೂಡೇೂಣ?ಬರೇ ನಿಮ್ಮ ರಾಜಕೀಯ ಲೆಕ್ಕಾಚಾರದಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಹಾಳು ಮಾಡ ಬೇಡಿ.
ನಮ್ಮ ರಾಜ್ಯದಲ್ಲಿ ದ್ವಿ ಭಾಷಾ ನೀತಿ ಜಾರಿ ಗೊಳಿಸಿ ಸುಲಭವಾಗಿ ಕೈತೊಳೆದು ಕೊಳ್ಳ ಬಹುದು.ಆದರೆ ನಮ್ಮ ಕನಾ೯ಟಕದವರು ಕೂಡಾ ಬೇರೆ ಬೇರೆ ರಾಜ್ಯಗಳಲ್ಲಿ ಬದುಕುಕಟ್ಟಿಕೊಂಡಿದ್ದಾರೆ ಅನ್ನುವುದು ಮರೆಯುವಂತಿಲ್ಲ.ಅವರುಕೂಡಾ ನಮ್ಮ ಹಾಗೆ ದ್ವಿ ಭಾಷಾ ನೀತಿ ಅಳವಡಿಸಿಕೊಂಡರೆ ನಮ್ಮ ಮಕ್ಕಳ ಪರಿಸ್ಥಿತಿ ಏನಾಗ ಬಹುದು ಅನ್ನುವುದನ್ನು ಗಂಭೀರವಾಗಿ ಚಿಂತಿಸಲೇ ಬೇಕು.ಸದ್ಯಕ್ಕೆ ಕೆಲವು ರಾಜ್ಯಗಳಲ್ಲಿ ಕನ್ನಡ ಭಾಷೆ ಕಲಿಕೆಗೂ ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ಸದ್ಯಕ್ಕೆ ನೆಮ್ಮದಿಯಿಂದ ಕನ್ನಡದವರು ಬೇರೆ ರಾಜ್ಯಗಳಲ್ಲಿ ಗೌರವದಿಂದ ಬದುಕ ಬಹುದಾಗಿದ್ದು ಅದಕ್ಕೂ ಸಂಚಕಾರವನ್ನು ನಾವೇ ಮಾಡಿಕೊಡುವ ಪರಿಸ್ಥಿತಿ ನಿಮಿ೯ಸಿಕೊಡುವಂತೆ ಆಗ ಬಹುದು.ನಮ್ಮ ರಾಜ್ಯದ ಗಡಿ ಪ್ರದೇಶಗಳಾದ ಕಾಸರಗೋಡು ಬೆಳಗಾಂ ಪ್ರದೇಶಗಳಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗ ಬಹುದು.ನಮ್ಮ ಒಕ್ಕೂಟ ವ್ಯವಸ್ಥೆ ಆರೇೂಗ್ಯ ಪೂರ್ಣವಾಗಿ ನೆಲೆಸ ಬೇಕಾದರೆ ತ್ರಿ ಭಾಷಾ ನೀತಿ ಅಷ್ಟೇ ಪ್ರಾಮುಖ್ಯ ಅನ್ನುವುದನ್ನು ನಮ್ಮ ರಾಷ್ಟ್ರದ ಒಕ್ಕೂಟ ವ್ಯವಸ್ಥೆಯ ಇತಿಹಾಸವೇ ಸಾಬೀತು ಪಡಿಸಿದೆ.

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.