ಮಂಗಳೂರು: ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ, ಪಬ್ಬಮಾಮ್ ಖ್ಯಾತಿಯ ಪ್ರಭಾಕರ್ ಕಾಮತ್ (79) ಅವರು ಇಂದು ನಿಧನ ಹೊಂದಿದರು.
ಅವರಿಗೆ ಅ.28ರಂದು ಮಂಗಳೂರಿನ ಭಾರತ್ ಮಾಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದ್ದು, ಇದರಿಂದ ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಇವರು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿ 1974ರಲ್ಲಿ ಐಡಿಯಲ್ ಐಸ್ ಕ್ರೀಮ್ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇಂದು ಐಡಿಯಲ್ ಐಸ್ ಕ್ರೀಮ್ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ.