ಕೆನರಾ ಬ್ಯಾಂಕ್ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಸಮಾರೋಪ

ಉಡುಪಿ: ನಗರದ ಕೆನರಾ ಬ್ಯಾಂಕ್‍ ಸರ್ಕಲ್ ಕಚೇರಿ ವತಿಯಿಂದ ಅ. 17ರಿಂದ ನ. 2ರ ವರೆಗೆ ಹಮ್ಮಿಕೊಂಡ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಸಮಾರೋಪ ಸೋಮವಾರ ನಡೆಯಿತು.

ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ. ಗಾಂವ್ಕರ್ ಮಾತನಾಡಿ, ಕೋವಿಡ್ 19ರ ಬಳಿಕ ಸಾರ್ವಜನಿಕ ಸೇವೆಯಲ್ಲಿರು ಎಲ್ಲರ ಜವಾಬ್ದಾರಿಯೂ ಹೆಚ್ಚಾಗಿದೆ. ನಾವೆಲ್ಲರೂ ಮತ್ತೊಮ್ಮೆ ನಾಡು ಕಟ್ಟಲು ಹೆಚ್ಚಿನ ಪರಿಶ್ರಮ ಪಡಬೇಕು. ಸಾಮಾಜಿಕ, ಆರ್ಥಿಕ ಚೇತರಿಕೆಗೆ ಎಲ್ಲರೂ ಶ್ರಮಿಸಬೇಕು. ಆ ಮೂಲಕ ದೇಶವನ್ನು ಆರ್ಥಿಕವಾಗಿ ಬಲಪಡಿಸಬೇಕಿದೆ ಎಂದರು.

ಮಹಾಪ್ರಬಂಧಕ ಬಿ. ಯೋಗೀಶ್ ಆಚಾರ್ಯ ಅಧ್ಯಕ್ಷೀಯ ಭಾಷಣ ಮಾಡಿ, ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ವಲಯ ಕಚೇರಿ ಕೈಗೊಂಡ ವಿಜಿಲೆನ್ಸ್ ಉಪಕ್ರಮಗಳನ್ನು ಅವರು ವಿವರಿಸಿದರು. ಮಾತ್ರವಲ್ಲದೆ ಕೋವಿಡ್ 19ರ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮಾಡಿರುವ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಆರತಿ ಬಿ. ಕುಮಾರಿ ಪ್ರಾರ್ಥಿಸಿದರು. ಉಪಮಹಾಪ್ರಬಂಧಕ ರಾಘವ ನಾಯಕ್ ಕೆ. ಸ್ವಾಗತಿಸಿದರು. ಕೇಂದ್ರೀಯ ವಿಜಿಲೆನ್ಸ್ ಆಯೋಗ ನೀಡಿದ ಸಂದೇಶವನ್ನು ಉಪಮಹಾಪ್ರಬಂಧಕ ಬಾಲ್ ಮುಕುಂದ್ ಶರ್ಮಾ ಓದಿದರು. ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಆರ್ ಒ ಮುಖ್ಯಸ್ಥೆ ಸುಚಿತ್ರಾ ಎಸ್. ವಂದಿಸಿದರು.