ಹಿರಿಯಡಕ: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಮೀನು ಮಾರುಕಟ್ಟೆ ಬಳಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಗುಡ್ಡೆಯಂಗಡಿ ನೆಡ್ಲು ಬೈಲು ನಿವಾಸಿ 33 ವರ್ಷದ ಮನೋಹರ ಜೋಗಿ ಎಂದು ಗುರುತಿಸಲಾಗಿದೆ.
ಮನೋಹರ್ ವಾಹನ ಚಾಲಕರಾಗಿದ್ದು, ಕೆಲಸ ಮುಗಿಸಿ ಹಿರಿಯಡಕದಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಬಸ್ ಮನೋಹರ್ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದ ಮನೋಹರ ಜೋಗಿ
ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












