ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು

ತುಮಕೂರು: ಲಾರಿಯೊಂದು ಕ್ಯಾಂಟರ್ ವಾಹನಕ್ಕೆ ಡಿಕ್ಕಿ‌ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಸಿರಾ ತಾಲ್ಲೂಕಿನ ಗಾಂಧಿನಗರ ಕ್ರಾಸ್‌ನಲ್ಲಿ ನಡೆದಿದೆ.

ಮೃತರನ್ನು ಟ್ರಕ್ ಚಾಲಕ ಶ್ರೀನಿವಾಸ್ (35), ಕ್ಲೀನರ್ ಮಹೇಶ್ (38) ಮತ್ತು ಮತ್ತೊಂದು ಟ್ರಕ್ ಚಾಲಕ ನಿಂಗರಾಜು (40) ಎಂದು ಗುರುತಿಸಲಾಗಿದೆ.

ಶಿರಾ ಕಡೆಯಿಂದ ತಮಿಳುನಾಡಿಗೆ ಕ್ಯಾಂಟರ್ ನಲ್ಲಿ ಭತ್ತ ಕಟಾವು ಮಾಡುವ ಯಂತ್ರವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಕ್ಯಾಂಟರ್ ಹಿಂಬದಿ ಚಕ್ರ ಪಂಚರ್ ಆಗಿದೆ. ಚಕ್ರ ಬದಲಿಸಲು ಚಾಲಕ ಮುಂದಾಗಿದ್ದಾರೆ. ಈ ವೇಳೆ ಬಳ್ಳಾರಿಯಿಂದ ಬೆಂಗಳೂರಿಗೆ  ಮೊಟ್ಟೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಕ್ಯಾಂಟರ್ ಗೆ ಡಿಕ್ಕಿಯಾಗಿದೆ.

ಕ್ಯಾಂಟರ್ ಲಾರಿಯಲ್ಲಿದ್ದ ಭತ್ತ ಕಟಾವು ಮಾಡುವ ಯಂತ್ರದ ಆಪರೇಟರ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹೊಳೆಅನ್ನೇರಿ ಗ್ರಾಮದ ನಿಂಗರಾಜು (22)  ಹಾಗೂ ದಾವಣಗೆರೆ ತಾಲ್ಲೂಕಿನ ಸ್ಯಾಗಳಿ ಗ್ರಾಮದ ಶ್ರೀನಿವಾಸ್ (22) ಮತ್ತು ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮಹೇಶ್ (25)   ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.