ತೆಂಕನಿಡಿಯೂರು ಗ್ರಾ.ಪಂ. ದುರಾಡಳಿತದ ವಿರುದ್ದ ವೀರಮಾರುತಿ ವ್ಯಾಯಾಮ ಶಾಲೆ ನೇತೃತ್ವದಲ್ಲಿ ಮುತ್ತಿಗೆ

ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿಯವರ ಮುಂದಾಳತ್ವದಲ್ಲಿ ವ್ಯಾಯಾಮ ಶಾಲೆ ಪದಾಧಿಕಾರಿಗಳು ಹಾಗೂ ತೆಂಕನಿಡಿಯೂರು ಗ್ರಾಮಸ್ಥರನ್ನು ಜೊತೆಗೂಡಿಸಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ದುರಾಡಳಿತದ ವಿರುದ್ದ ಪಂಚಾಯತಿ ಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯತ್ ಉದ್ದೇಶ ಪೂರ್ವಕವಾಗಿ ವ್ಯಾಯಾಮ ಶಾಲೆಯ ರಸ್ತೆಗೆ ಬಂದಂತಹ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸದೆ ತನ್ನ ಬೇಜವ್ಬಾರಿತನದಿಂದ ಅನುದಾನ ಹಿಂದೆ ಹೋಗುವಂತೆ ಮಾಡಿದೆ

ಅದೇ ರೀತಿ ಇಲ್ಲಿನ ಸ್ಮಶಾನವನ್ನು ಅಭಿವೃದ್ಧಿಪಡಿಸುವ ನೆಪದಿಂದ ಸ್ಮಶಾನದ ದುರಾವಸ್ಥೆಗೆ ಗ್ರಾಮ ಪಂಚಾಯತ್ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ವ್ಯಾಯಾಮ ಶಾಲೆಯ ಉಪಾಧ್ಯಕ್ಷ ಅನಿಲ್ ಪಾಲನ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.