ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆ: ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ

ಕಾರ್ಕಳ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 11ನೇ ಮತ್ತು 12ನೇ ಸೇವಾ ಕಾರ್ಯವು ನಡೆಯಿತು.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಠದಕರೆ ನಿವಾಸಿ ಮಗಳಿನೊಂದಿಗೆ ವಾಸಿಸುತ್ತಿರುವ ಅಶಕ್ತ ವೃದ್ಧೆ ಕಮಲರವರ ಕುಟುಂಬಕ್ಕೆ ಮತ್ತು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದ ದುಡಿಯಲು ಸಾಧ್ಯವಾಗದ ಅಶಕ್ತ ವೃದ್ಧ ದಂಪತಿಗಳಾದ ಬಾಬು ಮೂಲ್ಯ ಮತ್ತು ಠಾಕಮ್ಮ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ ಸದಸ್ಯೆ ರೇಷ್ಮ ಉದಯ ಶೆಟ್ಟಿ, ಇನ್ನಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಿತಾ ಶೆಟ್ಟಿ, ಇನ್ನಾ ಗ್ರಾಪಂ ಸದಸ್ಯ ಚಂದ್ರಹಾಸ್ ಶೆಟ್ಟಿ ಕಾಚೂರು, ವಿಶ್ವ ಹಿಂದೂ ಪರಿಷತ್ ಕಾಂಜರಕಟ್ಟೆ ಘಟಕ ಉಪಾಧ್ಯಕ್ಷ ಸುರೇಂದ್ರ ಇನ್ನಾ, ಕಾಶಿಪಟ್ಣ ಗ್ರಾಪಂ ಸದಸ್ಯರಾದ ರವೀಂದ್ರ ಪಿ ಮತ್ತು ಅಶೋಕ್ ಕುಮಾರ್ ಜೈನ್, ಸಂಸ್ಥೆಯ ಹಿರಿಯ ಸಲಹೆಗಾರ ರಾಧಾಕೃಷ್ಣ ಮಾನ್ಯ.

ಸಂಸ್ಥಾಪಕ ಅಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷ ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕ ಪುಷ್ಪರಾಜ್ ರಾವ್, ಸಂಸ್ಥಾಪಕ ಮತ್ತು ಟೀಮ್ ಮಂಜುಶ್ರೀ ಕುಡ್ಲ ತಂಡದ ಅಧ್ಯಕ್ಷ ಚಂದ್ರೇಶ್ ಮಾನ್ಯ, ಉಪಾಧ್ಯಕ್ಷ ರಮೇಶ್ ಕುಲಾಲ್ ನಾರಾಯಣ ಮಂಗಲ, ಸದಸ್ಯರಾದ ಶರಣ್ ಬಜಿರೆ(ವೇಣೂರು), ಸಚಿನ್ ಬಜಿರೆ(ವೇಣೂರು), ಪ್ರದೀಪ್‌ ಕಾಶಿಪಟ್ಣ, ಸ್ಥಳೀಯರಾದ ಎಲ್ಲಪ್ಪ ಪೂಜಾರಿ, ಕರಿಯ ಮೊಯ್ಲಿ, ಶಂಕರ ಆರ್ ಮೂಲ್ಯ, ಹರೀಶ್ ಗೊಲ್ಲ ಕುಕ್ಕಾಜೆ, ಸತೀಶ್ ಗೊಲ್ಲ ಕುಕ್ಕಾಜೆ ಮೊದಲಾದವರು ಉಪಸ್ಥಿತರಿರದ್ದರು.