2022 ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ 7 ಅತ್ಯುತ್ತಮ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ತನ್ನ ಒಂದನೇ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಮೊದಲ ಮೂರನೇ ಸ್ಥಾನದಲ್ಲಿ ವ್ಯಾಗನ್ ಆರ್, ಬಲೇನೋ ಮತ್ತು ಸ್ವಿಫ್ಟ್ ಕಾರುಗಳಿದ್ದರೆ ನಾಲ್ಕನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್, ಮಾರುತಿ ಸುಝುಕಿ ಅನ್ನು ಬೆನ್ನಟ್ಟುತ್ತಿದೆ. ಮಾರುತಿ ಸುಝುಕಿ ಅವರ ಆಲ್ಟೋ, ಹ್ಯುಂದಯಿ ಕಂಪನಿಯ ಕ್ರೆಟಾ ಮತ್ತು ಮಾರುತಿ ಯವರ ಸ್ವಿಫ್ಟ್ ಕ್ರಮವಾಗಿ ಐದು ಆರು ಮತ್ತು ಏಳನೇ ಸ್ಥಾನದಲ್ಲಿವೆ.
ಕಳೆದ ಮೂರು ವರ್ಷಗಳಿಂದ ಇವಿ ಕಾರುಗಳ ಮಾರಾಟದಲ್ಲಿ ಟಾಟಾ ಮೋಟರ್ಸ್ ತನ್ನ ಪಾರುಪತ್ಯವನ್ನು ಮೆರೆದಿದೆ. ಟಾಟಾ ಮೋಟಾರ್ಸ್ ಸತತ ಏಳು ತ್ರೈಮಾಸಿಕ ನಷ್ಟದ ನಂತರ ನಿವ್ವಳ ಲಾಭವನ್ನು ವರದಿ ಮಾಡಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಎಲ್ಲರ ಅಂದಾಜುಗಳನ್ನು ಧೂಳೀಪಟ ಮಾಡಿ 3,043 ಕೋಟಿ ನಿವ್ವಳ ಲಾಭ ಹಾಗೂ 88,489 ಕೋಟಿ ರೂಗಳ ನಿವ್ವಳ ಮಾರಾಟ ಮಾಡಿದೆ.
85% ಮಾರುಕಟ್ಟೆ ಪಾಲಿನೊಂದಿಗೆ ಇವಿ ಕಾರುಗಳ ಮಾರುಕಟ್ಟೆಯಲ್ಲಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿರುವ ಟಾಟಾ ಮೋಟರ್ಸ್ ಪಾರುಪತ್ಯವನ್ನು ಮುರಿಯಲು ಚೀನಾದ ಎಂಜಿ ಮೋಟಾರ್ ಮತ್ತು ಬಿವೈಡಿ ಕಂಪನಿಗಳು ಭಾರತೀಯ ಮಾರುಕಟ್ಟೆಯ ಮೂರನೇ ಒಂದು ಪಾಲನ್ನು ಆಕ್ರಮಿಸಲು ಹವಣಿಸುತ್ತಿವೆ. ಇದಲ್ಲದೆ ಮಹೀಂದ್ರಾ ಕೂಡಾ ತನ್ನ ಎಕ್ಸ್.ಯು.ವಿ 400 ಅನ್ನು ಬಿಡುಗಡೆ ಮಾಡಿದೆ.












