ತ್ರಿಶಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

ಕಟಪಾಡಿ: ದೇಶ ಭಕ್ತಿ ಎನ್ನುವುದು ಯಾವತ್ತೋ ಒಂದು ದಿನದ ಆಚರಣೆ ಅಲ್ಲ, ಅದು ಪ್ರತಿದಿನವೂ ನಮ್ಮೊಳಗೆ ನಮ್ಮ ಯೋಚನೆಗಳಲ್ಲಿ ಅಡಕವಾಗಿರುವಂಥದ್ದು ಎಂದು ಖ್ಯಾತ ಆರ್ಥೋಪೆಡಿಕ್ ಸರ್ಜನ್ ಅರ್ಜುನ್ ಬಲ್ಲಾಳ್ ಹೇಳಿದರು. ಅವರು ಇತ್ತೀಚಿಗೆ ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಜೊತೆಯಾಗಿ ಆಚರಿಸಿದ್ದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣಗೈದು ಮಾತನಾಡಿದರು. ಕಾರ್ಯಕ್ರಮದಲ್ಲಿ ತ್ರಿಶಾ ಹಾಗೂ ಎಸ್.ವಿ.ಎಸ್. ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, […]

ಪ್ರತಿಯೊಬ್ಬರಲ್ಲೂ ನಾವು ಭಾರತೀಯರೆಂಬ ಅಭಿಮಾನ ಇರಬೇಕು: ಐ.ಎನ್.ಎಸ್ ಕಮಾಂಡರ್ ಅಶ್ವಿನ್ ರಾವ್

ಕಾರ್ಕಳ: ದೇಶದ ನಾಗರಿಕನಾಗಿ ಸ್ವಯಂ ಪ್ರೇರಣೆಯಿಂದ ಜವಾಬ್ದಾರಿಗಳನ್ನು ವಹಿಸಿಕೊಂಡು ದೇಶದ ಏಳಿಗೆಗೆ ಕೈ ಜೋಡಿಸಬೇಕು. ದೇಶ ಅಂದ್ರೆ ನಾವು, ನಾವು ಅಂದ್ರೆ ದೇಶ ಎಂಬ ಭಾವ ಮೊಳಗಬೇಕು. ನಾನು ಭಾರತೀಯ ಎಂಬ ಹೆಮ್ಮೆ ಗರ್ವ, ಅಭಿಮಾನ ಇರಬೇಕೆಂದು ಕೊಚ್ಚಿಯ ಐ.ಎನ್.ಎಸ್. ಶಾರದಾ ಕಮಾಂಡರ್ ಅಶ್ವಿನ್.ಎಂ.ರಾವ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಧ್ವಜಹಾರಿಸಿ ಮಾತನಾಡಿದರು. ಶಿಸ್ತುಬದ್ಧ ವಿದ್ಯಾರ್ಥಿ ಜೀವನವು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಜವಾಬ್ದಾರಿಯುತ ಮನಸ್ಥಿತಿಯು ಎಂತಹ ಪ್ರತಿಕೂಲ ಸ್ಥಿತಿಯನ್ನು […]

ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

ಕಾರ್ಕಳ: ರಾಜ ಪ್ರಭುತ್ವದೆಡೆಯಿಂದ ಪ್ರಜಾಪ್ರಭುತ್ವದ ಕಡೆಗೆ ಸಾಗಿದ ಹೆಗ್ಗುರುತೇ ಗಣರಾಜ್ಯೋತ್ಸವ. ಸಂವಿಧಾನ ನಮಗೆ ಅನೇಕ ಕೊಡುಗೆಗಳನ್ನು ನೀಡಿದೆ. ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ದಿನವಿದು. ಆದ್ದರಿಂದ ನಾವೆಲ್ಲರೂ ಸಮಾನರೆಂಬ ಭಾವನೆಯನ್ನು ಸಂವಿಧಾನ ನಮಗೆ ನೀಡಿದೆ. ಕಾನೂನಿನ ಅಂಶಗಳನ್ನು ಗೌರವಿಸಿ, ರಾಷ್ಟ್ರಧ್ವಜ, ರಾಷ್ಟ್ರೀಯತೆಯನ್ನು ಗೌರವಿಸಿ ಬದುಕಬೇಕು ಎಂದು ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್‌ ಹೇಳಿದರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಂಸ್ಥಾಪ ಆದರ್ಶ ಎಂ.ಕೆ, ಸಂವಿಧಾನಾತ್ಮಕವಾಗಿ ನಮಗೆ ನೀಡಿರುವ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಪ್ರಜಾಸತ್ತಾತ್ಮಕ […]

ಮಂಗಳೂರು: ಮಹಿಳಾ ಉದ್ದಿಮೆದಾರರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ

ಮಂಗಳೂರು: ಉಬುಂಟು ಕನ್ಸೋರ್ಟಿಯಂ ಆಫ್ ವಿಮೆನ್ ಎನ್ಟಪ್ರ್ಯೂನರ್ಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಮತ್ತು ದ.ಕ ಜಿಲ್ಲೆಯ ಮಹಿಳಾ ಉದ್ದಿಮೆದಾರರಿಗಾಗಿ ಡಿಜಿಟರ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರವನ್ನು ಫೆ.1 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಮಂಗಳೂರಿನ ಬಿಜೈ ಕಾಪಿಕಾಡು ರಸ್ತೆಯಲ್ಲಿರುವ ಸುಪ್ರಭಾತ್ ಕಟ್ಟಡದ ಅಜಂತಾ ಬಿಸ್ ನೆಸ್ ಸೆಂಟರಿನಲ್ಲಿ ಆಯೋಜಿಸಲಾಗಿದೆ. ಆಸಕ್ತರು https://forms.gle/HmqhVmkhgJhHc3339 ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಸಂಪೂರ್ಣ ಉಚಿತವಾಗಿರಲಿದೆ. ಹೆಚ್ಚಿನ ಮಾಹಿತಿಗಾಗಿ: 6360-598377/ 9845194883 ಅನ್ನು ಸಂಪರ್ಕಿಸಬಹುದು.

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿರುವುದು ಸಿದ್ದರಾಮಯ್ಯನವರು: ಪ್ರಮೋದ್ ಮಧ್ವರಾಜ್ ತಿರುಗೇಟು

ಉಡುಪಿ: ಈ ರಾಜ್ಯದಲ್ಲಿ ಯಾರಾದರೂ ಹೆಚ್ಚು ಪಕ್ಷಾಂತರ ಮಾಡಿದ್ದರೆ ಅದು ಸಿದ್ದರಾಮಯ್ಯ. ಅವರು ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು 7 ಬಾರಿ ಪಕ್ಷಗಳನ್ನು ಬದಲಾಯಿಸಿದ್ದು ನಾನು ಹುಟ್ಟಿನಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಈಗ ಸನ್ನಿವೇಶಕ್ಕೆ ಅನುಗುಣವಾಗಿ ಬಿಜೆಪಿ ಸೇರಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನನ್ನನ್ನು ಪಕ್ಷಾಂತರಿ […]