ಟೋಕಿಯೊ: ತಂತ್ರಜ್ಞಾನ ಬಹಳ ವೇಗವಾಗಿ ಮುಂದುವರಿಯುತ್ತಲೇ ಇದೆ. ಸ್ಮಾರ್ಟ್ ಟಿವಿ, ಟಚ್ ಟಿವಿ ಅಬ್ಬರದ ನಡುವೆ ಇದೀಗ ಎಲೆಕ್ಟ್ರಾನಿಕ್ಸ್ ನ ದಿಗ್ಗಜ ದೇಶ ಜಪಾನ್, ಒಂದು ಹೆಜ್ಜೆ ಮುಂದೆ ಹೋಗಿ ಪರದಯ ಮೇಲಿಂದ ರುಚಿಯನ್ನೂ ನೋಡಬಹುದಾದ ಟಿವಿಯನ್ನು ಅಭಿವೃದ್ಧಿಪಡಿಸಿದ್ದು ಟೇಸ್ಟ್ ಟಿವಿ ಈಗ ಸಖತ್ ಸುದ್ದಿಯಲ್ಲಿದೆ.
ಅಚ್ಚರಿಯಾದರೂ ಇದು ಸತ್ಯ. ನೆಕ್ಕಬಹುದಾದ ಟಿವಿ ಪರದೆಯನ್ನು ಜಪಾನ್ ಅಭಿವೃದ್ಧಿಪಡಿಸಿದ್ದು ಹಲವು ವಿಧವಾದ ಆಹಾರದ ರುಚಿಗಳನ್ನು ಈ ಟಿವಿಯಲ್ಲಿ ಪ್ರೇಕ್ಷಕರು ಆಸ್ವಾದಿಸಬಹುದು. ಇದನ್ನು ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಕರೆಯಲಾಗುತ್ತಿದ್ದು, ಟಿ ವಿಯಲ್ಲಿ ಬಿತ್ತರವಾಗುವ ಆಹಾರದ ರುಚಿ ನೀಡುವುದಕ್ಕಾಗಿ 10 ಫ್ಲೇವರ್ ಡಬ್ಬಿಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತದೆ. ಇದು ನಂತರದಲ್ಲಿ ಟಿವಿ ಪರದೆಯ ಮೇಲೆ ಮೂಡಲಿದ್ದು ಬಳಕೆದಾರರು ರುಚಿ ವಿವಿಧ ರುಚಿಗಳನ್ನು ನೋಡಬಹುದಾಗಿದೆ.
ಮನೆಯಲ್ಲೇ ಕುಳಿತು ರೆಸ್ಟೋರೆಂಟ್ ಗಳಲ್ಲಿ ತಿನ್ನುವ ಅನುಭವವನ್ನು ನೀಡುವುದಕ್ಕಾಗಿ ಈ ಟೇಸ್ಟ್ ಟಿವಿಯನ್ನು ತಯಾರಿಸಲಾಗಿದೆ.ಆದಷ್ಟು ಶೀಘ್ರವೇ ಈ ಟಿವಿ ಮಾರುಕಟ್ಟೆಗೆ ಬಂದರೆ ಟಿವಿಗಳಲ್ಲಿ ಅಡುಗೆ ಕಾರ್ಯಕ್ರಮ, ಸವಿ ತಿಂಡಿಗಳ ಕಾರ್ಯಕ್ರಮ ಇನ್ನು ಪ್ರಸಾರವಾದರೆ ಮತ್ತೂ ಖುಷಿಯಿಂದ ನೋಡಬಹುದು . ಅಂದ ಹಾಗೆ ಈ ಟಿವಿಯ ವಾಣಿಜ್ಯ ಆವೃತ್ತಿಯ ಬೆಲೆ ಸುಮಾರು 100,000 ಯೆನ್ ಗಳಷ್ಟು ($875) ಗಳಷ್ಟಿದ್ದು ಈ ಟಿವಿಯಲ್ಲಿ ಟೇಸ್ಟಿಂಗ್ ಗೇಮ್ ಗಳು, ಕ್ವಿಜ್, ಸಮ್ಮಿಲಿಯರ್ಸ್ ಗಾಗಿ ಡಿಸ್ಟೆನ್ಸ್ ಲರ್ನಿಂಗ್ ಗಳೂ ಲಭ್ಯವಿದೆ.