ಮುಖ್ಯಮಂತ್ರಿಗಳ ಚೊಚ್ಚಲ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ, ಮಾ.04: ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿತ್ತ ಸಚಿವರಾಗಿ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಕೃಷಿವಲಯ, ಮೀನುಗಾರಿಕೆ, ಮಹಿಳಾ ಸಬಲೀಕರಣಕ್ಕೆ ಒತ್ತನ್ನು ನೀಡಲಾಗಿದ್ದು, ನವಕರ್ನಾಟಕ ನಿರ್ಮಾಣಕ್ಕೆ ಪಂಚಸೂತ್ರಗಳನ್ನು ಅಳವಡಿಸಕೊಳ್ಳಲಾಗಿದೆ. ಟೆಂಡರ್‌ಗಳ ಪರಿಶೀಲನೆಗೆ ರಾಜ್ಯ ಮಟ್ಟದ ಸಮಿತಿ, ಮೀನುಗಾರ ಮಹಿಳೆಯರಿಗೆ ಐದು ಸಾವಿರ ಮನೆಗಳ ನಿರ್ಮಾಣ, ರೈತಶಕ್ತಿ ಯೋಜನೆ ಮೂಲಕ ರೈತರಿಗೆ 250 ರೂ. ಡೀಸೆಲ್ ಸಹಾಯಧನ, ವಿನೂತನ ಏಳು ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಎರಡು ಕೃಷಿ ಕಾಲೇಜುಗಳ ಸ್ಥಾಪನೆ, ರೈತ ಸಮ್ಮಾನ್ ಕಾರ್ಯಕ್ರಮ ಮುಂದುವರಿಕೆ, 15 […]

ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಈ ಬಾರಿಯ ಬಜೆಟ್ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಬಲೀಕರಣಕ್ಕೆ ಒತ್ತು ನೀಡಿರುವ ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಬಜೆಟ್ ನಲ್ಲಿ ಯಾವುದೇ ಹೆಚ್ಚುವರಿ ತೆರಿಗೆ ಭಾರ ಹೊರಿಸದೆ ಇದ್ದುದರಲ್ಲೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಆಡಳಿತ ಸುಧಾರಣೆಗೆ ಹೆಚ್ಚಿನ ವೆಚ್ಚ, ಕಾಶಿ ಯಾತ್ರೆಗೆ ಸಬ್ಸಿಡಿ, ಪವಿತ್ರ ಯಾತ್ರೆ ಯೋಜನೆ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಯೋಜನೆ, […]

ಉಡುಪಿ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ಪುತ್ತಿಗೆ ಶ್ರೀಗಳಿಂದ ರಜತಕವಚ ಸಮರ್ಪಣೆ

ಉಡುಪಿ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಷಷ್ಟ್ಯಬ್ದಪೂರ್ತಿ ಪ್ರಯುಕ್ತ ಉಡುಪಿಯ ಮಹತೋಭಾರ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಗುರುವಾರ ₹15 ಲಕ್ಷ ರೂ. ವೆಚ್ಚದಲ್ಲಿ ರಜತಕವಚ ಸಮರ್ಪಣೆ ಮಾಡಲಾಯಿತು. ಅನಂತೇಶ್ವರ ದೇವರ ಮಹಾರಥೋತ್ಸವದ ನಿಮಿತ್ತ ಜೋಡು ದೇಗುಲದ ಆಡಳಿತ  ಮುಕ್ತೇಸರರೂ ಆಗಿರುವ ಪುತ್ತಿಗೆ ಶ್ರೀಗಳು, ವೈಯಕ್ತಿಕ ಸೇವಾರೂಪವಾಗಿ ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿ ಬಂದು ದೇವರಿಗೆ ರಜತಕವಚ ಸಮರ್ಪಣೆ ಮಾಡಿದರು.

ಮುಖ್ಯಮಂತ್ರಿಗಳ ಚೊಚ್ಚಲ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕ: ಮಟ್ಟಾರ್ ರತ್ನಾಕರ ಹೆಗ್ಡೆ

ಉಡುಪಿ, ಮಾ.04: ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿತ್ತ ಸಚಿವರಾಗಿ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಕೃಷಿ ವಲಯ, ಮೀನುಗಾರಿಕೆ, ಮಹಿಳಾ ಸಬಲೀಕರಣಕ್ಕೆ ಒತ್ತನ್ನು ನೀಡಲಾಗಿದ್ದು, ನವಕರ್ನಾಟಕ ನಿರ್ಮಾಣಕ್ಕೆ ಪಂಚಸೂತ್ರಗಳನ್ನು ಅಳವಡಿಸಕೊಳ್ಳಲಾಗಿದೆ. ಟೆಂಡರ್‌ಗಳ ಪರಿಶೀಲನೆಗೆ ರಾಜ್ಯ ಮಟ್ಟದ ಸಮಿತಿ, ಮೀನುಗಾರ ಮಹಿಳೆಯರಿಗೆ ಐದು ಸಾವಿರ ಮನೆಗಳ ನಿರ್ಮಾಣ, ರೈತಶಕ್ತಿ ಯೋಜನೆ ಮೂಲಕ ರೈತರಿಗೆ 250 ರೂ. ಡೀಸೆಲ್ ಸಹಾಯಧನ, ವಿನೂತನ ಏಳು ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಎರಡು ಕೃಷಿ ಕಾಲೇಜುಗಳ ಸ್ಥಾಪನೆ, ರೈತ ಸಮ್ಮಾನ್ ಕಾರ್ಯಕ್ರಮ ಮುಂದುವರಿಕೆ, […]

ಜಿಲ್ಲೆಯಲ್ಲಿ ಮಾ.6 ರಿಂದ 10ರ ವರೆಗೆ ಬಾಲ್ಯ ವಿವಾಹ ನಿಷೇಧ ಕುರಿತು ಅಭಿಯಾನ ಕಾರ್ಯಕ್ರಮ: ಜಿಲ್ಲಾಧಿಕಾರಿ

ಉಡುಪಿ, ಮಾ.4: ಬಾಲ್ಯ ವಿವಾಹ ನಿಷೇದ ಅಂಗವಾಗಿ ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಲ್ಲಿ ಮಾರ್ಚ್ 6 ರಿಂದ 10 ರ ವರೆಗೆ ಎಲ್.ಇ.ಡಿ. ವಾಹನಗಳ ಮೂಲಕ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯ ವಿವಾಹದ ನಿಷೇದ ಕುರಿತಂತೆ ಜಿಲ್ಲೆಯ 9 ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 5 ಕಾರ್ಯಕ್ರಮಗಳಂತೆ ಒಟ್ಟು 25 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಎಲ್.ಇ.ಡಿ […]