“ವಿಶ್ವದಾಖಲೆಗೆ ಕ್ಷಣಗಣನೆ:ತನುಶ್ರೀ ಪಿತ್ರೋಡಿ”

ಉಡುಪಿ : ಈಗಾಗಲೇ 2 ಬಾರಿ ವಿಶ್ವದಾಖಲೆಗೈದ 10 ರ ವಯಸ್ಸಿನ ಈ ಬಾಲೆ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ, ಇಂದು 3 ನೇ ವಿಶ್ವದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಯೋಗಾಸನ ಭಂಗಿಯಾದ “Most number of rolls in one minute’ in Dhanurasana posture”ಸಾಧನೆಗೈಯುವ ಮೂಲಕ ಇತಿಹಾಸ ಬರೆಯಲಿದ್ದಾಳೆ.
ಈ ಕಾರ್ಯಕ್ರಮ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಉಡುಪಿ ಇದರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಇವರ ನೇತೃತ್ವದಲ್ಲಿ, ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಪಿತ್ರೋಡಿ ಇವರ ಸಹಯೋಗದೊಂದಿಗೆ ಇಂದು 23/02/2019 ಸಮಯ 5.00 ಗಂಟೆಗೆ ಉಡುಪಿಯ ಸೈಂಟ್ ಸಿಸಿಲಿಸ್ ಸಮೂಹ ಸಂಸ್ಥೆಯ ಕ್ರೀಡಾಂಗಣದಲ್ಲಿ ಸಾಕಾರಗೊಳ್ಳಲಿರುವುದು.
ಈ ದಾಖಲೆಯ ಬಾಲೆ ಮೂರು ದಶಕಗಳಿಂದ ಕರ್ನಾಟಕ ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಶಿಸ್ತು ಹಾಗೂ ಮಾದರಿಯ ದಾಖಲೆ ಬರೆದ ವೆಂಕಟರಮಣ ಪಿತ್ರೋಡಿ ಯ ಹೆಮ್ಮೆಯ ಸದಸ್ಯರೋರ್ವರ ಪುತ್ರಿ.  
                         -ಕೋಟ ರಾಮಕೃಷ್ಣ ಆಚಾರ್ಯ…