ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ

ಮಂಗಳೂರು: ದುಷ್ಕರ್ಮಿಗಳ ತಂಡ ಯುವಕನೊಬ್ಬನ ಮೇಲೆ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿದ ಘಟನೆ ಮಂಗಳೂರಿನ ಅಡ್ಡೂರು ಎಂಬಲ್ಲಿ ಸಂಭವಿಸಿದೆ.

ತಲವಾರು ದಾಳಿಗೆ ಒಳಗಾದ ಯುವಕನನ್ನು ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ ಎಂದು ಗುರುತಿಸಲಾಗಿದೆ. ಈತ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಮೂರು ಮಂದಿಯ ತಂಡ ದಾಳಿ ನಡೆಸಿದೆ. ಈ ಕೃತ್ಯವನ್ನು ಫರ್ವೀಝ್ ಹಾಗೂ ಸಹಚರರು ನಡೆಸಿದ್ದಾರೆ ಎಂದು ಎನ್ನಲಾಗಿದೆ.

ದಾಳಿಯಿಂದ ಗಾಯಗೊಂಡ ತಾಜುದ್ದೀನ್ ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.